ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, November 21, 2007

ಅವಳಿಗಾಗಿ...

ಮನಸ್ಸಲ್ಲಿ ಮನಸನಿಟ್ಟು,
ನನ್ನೆದೆಯಲ್ಲಿ ಅಳಿಸಲಾಗದ ಹೆಜ್ಜೆಗುರುತನಿಟ್ಟು
ಎನ್ನೆದೆಯ ಬಡಿತದಲಿ ಅವಳ ಹೆಸರನಿಟ್ಟು
ಮುಗುಳುನಗೆ ನಕ್ಕು ಹೋದವಳು...

ಉರಿಬಿಸಿಲಲಿ ತಂಪನಿಟ್ಟು
ತುಂತುರುಮಳೆಯಲಿ ಪುಳಕವನಿಟ್ಟು
ಮೌನದಲ್ಲೇ ಮಾತನಾಡಿಸಿ ಸಂತಸವ ಕೊಟ್ಟು
ಮತ್ತೆ ಬರುವೆನೆಂದು ಹೇಳಿದವಳು...

ಬೆಳದಿಂಗಳ ರಾತ್ರಿಯಲಿ
ತಾರೆಗಳ ಸಂತೆಯಲಿ
ಚೆಂದಿರನ ನಾಚಿಸುತ್ತಾ
ಬೆಳಕಚೆಲ್ಲಿಬಂದವಳು...

ನೆತ್ತಿಸುಡುವ ಸೂರ್ಯಕಿರಣಗಳ ನಡುವೆ
ದಾಹತುಂಬಿದ ದಾರಿಯಲ್ಲಿ
ತಂಪು ನೆರಳಾಗಿ ಬಂದು
ಅಮೃತ ಸಿಂಚನವನ್ನೆರೆದವಳು...

ಹೊಂಗನಸಿನಲ್ಲಿ ಬಂದು
ಬೆಚ್ಚನೆಯ ಅಪ್ಪುಗೆಯ ಕೊಟ್ಟು
ಸಿಹಿ ಮುತ್ತನಿಟ್ಟವಳು
ನೀ ಹೋದದ್ದಾದರೂ ಎಲ್ಲಿಗೆ ???

ನಿನ್ನ ಅಪ್ಪುಗೆಗಾಗಿ ಕಾದಿರುವ ನನ್ನ ಬಾಹುಗಳು
ನಿನ್ನ ಕೂಗಿ ಕರೆದಿದೆ,
ಬಳಿ ಬಂದು ಒಮ್ಮೆ ಆ ಕಿರುನಗೆಯ ಬೀರು...
ನಿನ್ನ ಕಣ್ಣ ಅಂಚಿನಲಿ ಮಾತನಾಡು...

ನಿಶ್ಯಬ್ಧತುಂಬಿರುವ ಈ ಬಾಳಿನಲಿ
ಸವಿನುಡಿಗಳ ತೋರಣವ ಕಟ್ಟಿ
ಬಾಳಹಾದಿಯಲಿ ಜೊತೆಗೂಡಿ ಸಾಗಲು
ಕನಸಿನಿಂದ ನನಸಾಗಿ ಬಾ...

Monday, November 12, 2007

ನೀನು..

ಮುಸ್ಸಂಜೆಯ ಮಡಿಲಿನಲ್ಲಿ
ತಂಗಾಳಿಯ ತಂಪಿನಲ್ಲಿ
ತೇಲಿಬಂದಿತೊಂದು ಬೆಚ್ಚನೆಯ ಸ್ಪರ್ಶ,
ಅದುವೇ ನಿನ್ನಯ ಉಸಿರು...

ಕಗ್ಗತ್ತಲ ಇರುಳಿನಲ್ಲಿ
ತಾರೆಗಳ ತೋಟದಲ್ಲಿ
ಬೆಳಗುತಿದ್ದ ಚಂದಿರನಲ್ಲಿ ನಾ ಕಂಡೆ
ನಿನ್ನಯ ಸೌಂದರ್ಯದ ಬಿಂಬ...

ಪುಷ್ಪರಾಶಿಗಳ ಘಮ ಘಮಿಸುವ ಅಲೆಗಳ ನಡುವೆ
ವೈವಿಧ್ಯಮಯ ವಿಸ್ಮಯಗಳ ನಡುವೆ
ಉಲ್ಲಾಸಭರಿತ ಗಾಳಿಯೊಂದು ಬೀರಿ ಬಂದಿತು
ಅವುಗಳಿಗೂ ಮೀರಿದ ನಿನ್ನಯ ಮೈ ಕಂಪು...

Monday, November 5, 2007

ऎ दिल्...

ऎ दिल् तु सम्भल् जा

तु है नादान् जॊ बुराई और् अच्हायी नही जान्ता है,
जॊ कॊइ भी हस्तॆ हुयॆ कुच्ह् बॊलॆ तु उस्कॆ सारॆ बात् मान् जाता है,

कहिन् ऐसा ना हॊ जायॆ कि जिसॆ तु अप्नॆ अन्दर् रख्कॆ इत्ना प्यार् कर्ता है,
वॊ तुझ्कॊ तॊड्कॆ तॆरॆ आन्गन् मै आन्सु चॊड् जायॆ.

ऎ दिल् तु सम्भल् जा

पाना है तुझॆ वॊह् प्यार् जॊ अटूट् हॊ,
जिस्मॆ ममता और् ढॆर् सारा ख्याल् हॊ,

जॊ तुझ्कॊ चाहॆ एक् प्यारी मासूम् बच्चे कि तरह्,
जॊ तुझ्कॊ पालॆ कभी ना मुर्झॆ हुयॆ फूल् कि तरह्...

तुझ्मॆ है ताकत् जॊ सह् सकॆ हर् गम्,
तु अगर् चाहॆ तॊ तु खुश् रहॆगा हर्दम्...

ऎ दिल् तु सम्भल् जा, ऎ दिल् तु सम्भल् जा, कहिन् देर् न हॊ जायॆ...

Saturday, November 3, 2007

ಯಾರು ???

ಮನದಿ ಹುದುಗಿರುವ ವಿಚಾರಗಳು ಹಲವು,
ತನ್ನದೇ ಆದ ಆಲೋಚನೆಗಳು ಹಲವು,
ಮನದಿ ಮೂಡಿರುವ ಭಾವನೆಗಳ ಕದನದಿ
ಗೆದ್ದವರು ಯಾರು ಸೋತವರು ಯಾರು...

ಸುಪ್ತ ಮನಸಿನ ವೇಗವನು ಹಿಡಿಯುವರು ಯಾರು,
ಸುಪ್ತ ಮನಸಿನ ಕನಸನು ಕಂಡವರು ಯಾರು..
ಎಲ್ಲ ಪರಿಧಿಗಳನು ಮೀರಿ ಈ ಮನವು ಜಿಗಿದ
ಜಿಗಿತವನು ಅಳತೆಗೋಲಿಟ್ಟು ಅಳೆದವರು ಯಾರು...

ನೆನ್ನೆ ನಾಳೆಗಳ ನಡುವೆ ಬಂದು ಹೋಗುವ ದಿನಗಳನು
ಸಂತಸದಿ ಕಳೆದೆನೆಂದು ಹೇಳುವವರು ಯಾರು..
ಪ್ರಕೃತಿಯ ಮಡಿಲಿನ ಈ ಪುಟ್ಟ ಜೀವದೊಳಗಿನ
ಪುಟ್ಟ ಮನಸಿನ ಮಾತನು ಕೆಳುವವರು ಯಾರು..

ಹೃದಯದ ಮಾತ ಬುದ್ದಿ ಕೇಳುವುದಿಲ್ಲ,
ಬುದ್ದಿಯ ಮಾತ ಹೃದಯ ಕೇಳುವುದಿಲ್ಲ
ಈ ಇಬ್ಬರನಡುವೆ ಪ್ರೀತಿ ಮೂಡಿಸುವವರು ಯಾರು...

ಇಂದಲ್ಲ ನಾಳೆ ಮಣ್ಣಲ್ಲಿ ಮಣ್ಣಾಗುವ ಈ ಶರೀರವನ್ನು
ಬಿಟ್ಟು ಹೊರಡುವ ಮನಸ್ಸಿಗೆ ಬುದ್ದಿ ಹೆಳುವವರು ಯಾರು...
ಪ್ರತಿ ದಿನದ ಬದುಕಿನಿಂದ ದುರಾಸೆಗೊಳಗಾಗಿ
ದಾರಿತಪ್ಪುವ ಮನಕೆ ಸರಿದಾರಿ ತೋರುವವರು ಯಾರು...

Wednesday, October 31, 2007

....

ಎನ್ನೆದೆಯ ಮಂದಿರಕೆ ನೀಬಂದು ಬೆಳಗಿದೆ ಪ್ರೀತಿಯ ದೀವಿಗೆಯ,
ದೀವಿಗೆಯ ಬೆಳಗಿ ಒಲವಿನ ಬೆಳಕ ಚೆಲ್ಲಿ ಬಂದಿರುವ ನಿನ್ನ ಅಂದಕೆ ನೀನೇ ಸಾಟಿ...

ಎನ್ನ ಮನದ ತುಂಬಾ ತುಂಬಿರುವ ನಿನ್ನ ನೆನಪ ಬಿಂದುಗಳ ಮಳೆಯಲ್ಲಿ ತೊಯುವಾಸೆ,
ನೆನಪ ಬಿಂದುಗಳಿಂದ ಮೂಡಿರುವ ಕಾಮನಬಿಲ್ಲಿನಲ್ಲಿ ನಿನ್ನ ಬಿಂಬವನು ನೋಡುವಾಸೆ...

Thursday, October 18, 2007

ಹಕ್ಕಿ ಹಾರಬೇಕಿದೆ....

ಬಂಧನದಿ ಸಿಲುಕಿರುವ ಹಕ್ಕಿ ಮುಕ್ತವಾಗಿ ಹಾರಬೇಕಿದೆ,
ಬಂಧ, ಸಂಭಂಧಗಳ ಸಂಕೋಲೆಯ ಕಳಚಿ

ನೀಲಿಗಗನದಿ ಸ್ವಚ್ಚಂದವಾಗಿ ವಿಹರಿಸಬೇಕಿದೆ.
ಪ್ರತಿ ಕ್ಷಣದಲೂ ಸಿಗುವ ಅಡೆತಡೆಗಳನು ದಾಂಟಿ

ಮನದಿ ಮೂಡುವ ತವಕ, ತುಮುಲಗಳನು ಮೀರಿ ಹಾರಬೇಕಿದೆ.
ನೇಸರನ ಮಡಿಲಿನಲ್ಲಿ ನಿರ್ಭಯವಾಗಿ ಒಂಟಿಯಾಗಿ ಸಾಗಬೇಕಿದೆ,

ತನ್ನ ಸುತ್ತ ಕವಿದಿರುವ ಮೋಹಜಾಲಗಳ
ಪರಿಧಿಯನು ಮೀರಿ ಸ್ವತಂತ್ರವಾಗಿ ತೇಲಬೇಕಿದೆ,

ಎತ್ತಣಿಂದಲೋ ಬೆಳೆದುಬಂದ ಸಂಭಂದಗಳ
ಯಾವಕ್ಷಣದಲೋ ಮೂಡಿದ ಸ್ನೇಹ ಬಾಂಧವ್ಯಗಳ

ಎಲ್ಲವನೂ ಮರೆಯಬೇಕಿದೆ, ಮೂಳೆ ಮಾಂಸಗಳ ಪಂಜರವ ತೊರೆಯಬೇಕಿದೆ...
ಇಂದಲ್ಲ ನಾಳೆ ಹಕ್ಕಿ ಹಾರಬೇಕಿದೆ.... ದೂರ ಬಲುದೂರ ಹೋಗಬೇಕಿದೆ...

Tuesday, September 11, 2007

...

ಹೊಳಪಿನಿಂದ ಕೂಡಿದ ನಿನ್ನ ಕಣ್ಣುಗಳು ಮುಂಜಾನೆಯ ಮಂಜಿನಂತೆ,
ನಿನ್ನಯ ಮೈ ಕಂಪಿನಿಂದ ನಿಸರ್ಗದ ತಂಗಾಳಿ ಪುಳಕಿತ ಗೊಂಡಂತೆ,

ನಿನ್ನಯ ಪಿಸುಮಾತು, ತುಂಟನಗೆ ನೇಸರನ ಮಡಿಲಿನ ಕಲರವದಂತೆ,
ನೀ ಹಾಡಿದ ಮಧುರಗೀತೆಗಳು ನನ್ನ ಅಂತರಾಳದಲ್ಲಿ ಮನೆಮಾಡಿದಂತೆ,

ನೀ ಜೊತೆಗಿರಲು ದಿನಗಳು ಕ್ಷಣಮಾತ್ರದಂತೆ,
ನೀನಿರದ ಬಾಳು ನಿತ್ಯಹರಿದ್ವರ್ಣದ ಕಾಡು ಮರುಭೂಮಿಯಾದಂತೆ...

Wednesday, July 25, 2007

ಬಾ ಓಲವೇ...

ಬಾ ಓಲವೇ...

ಮನದಿ ಕವಿದಿರುವ ಕತ್ತಲೆಯ ಕಾರ್ಮೋಡಗಳ ಸರಿಸಿ
ಓಲುಮೆಯ ಬೆಳಕ ಚೆಲ್ಲು ಬಾ...

ಬರಡು ಭೂಮಿಯ ಮೇಲಿನ ತಾಪವನು ತಂಪಾಗಿಸುವ
ತುಂತುರು ಮಳೆಯಾಗಿ ಬಾ...

ಕಗ್ಗತ್ತಲ ರಾತ್ರಿಯಲಿ ತಂಪಾದ ಗಾಳಿಯೊಂದಿಗೆ
ಬೆಳದಿಂಗಳಾಗಿ ಬಾ...

ಬಳಲಿ ಬೆಂಡಾಗಿರುವ ಮನಕೆ
ಅಮೃತ ಸಿಂಚನವ ತಾ...

ಮನದ ಮಿಡಿತವಾಗಿ ಬಾ,
ಹೃದಯದ ಬಡಿತವಾಗಿ ಬಾ...

ಒಣಗಿರುವ ಮರದಲ್ಲಿ ಜೀವವನು ನೀ ತುಂಬಿ,
ಹಸಿರ ಸಿರಿಯಾಗಿ ಬಾ..

ಬಾ ಓಲವೇ, ಬಾ...

Friday, May 18, 2007

ಹನಿಗಳು-1

ಕಣ ಕಣದಲೂ ನೀ ತುಂಬಿರುವಾಗ
ತನು ಮನದಲೂ ನೀ ಇರುವಾಗ
ಬೇರೇನು ಬೇಕು ಈ ಬಾಳಿಗೆ
ಸಾಕು ಎನಗೆ ನಿನ್ನೊಲುಮೆ....

Monday, May 14, 2007

ನಮಸ್ಕಾರ,

ನಮಸ್ಕಾರ,
ನನ್ನ ಎಲ್ಲಾ ಸ್ನೇಹಿತರಿಗೂ....
ನಾನು ಇಲ್ಲಿ ಬರೆದಿರೋದೆಲ್ಲ ಕವನವಲ್ಲ... ನಾನೊಬ್ಬ ಕವಿಯಲ್ಲ, ಮನಸ್ಸಿಗೆ ತೋಚಿದ್ದನ್ನ ನಾನಿಲ್ಲಿ ವ್ಯಕ್ತಪಡಿಸ್ತಾ ಇದ್ದೇನೆ. ಇಲ್ಲಿ ಬರೆದಿರೊದ್ರಲ್ಲಿ ಬಹಳಷ್ಟು ತಪ್ಪುಗಳಿವೆ. ನನ್ನ ಓದುಗರು ಅದನ್ನ ನನಗೆ ತಿದ್ದಿ ಹೇಳಬೇಕು. ಯಾರೂಕೂಡಾ ಹುಟ್ಟಿದ ತಕ್ಷಣ ಎಲ್ಲಾದನ್ನೂ ಕಲಿಯೋದಿಲ್ಲ. ನಡಿಯೋಕಾಲು ಎಡವೋದು ಸಹಜತಾನೆ ??? ನಿಮ್ಮ ಪ್ರೀತಿಯ ತಿದ್ದುಪಡಿಗೆ ನಾನು ಚಿರರುಣಿ...

Thursday, April 26, 2007

ಯೋಚನೆ...

ಆಲೋಚನೆಗಳ ಕಡಲಿನಲಿ ತೇಲಿರುವ ಹುಡುಗಿ
ಮುಖದ ಮೇಲೆ ಮೂಡಿಹುದು ಯೋಚನಾ ಬಿಂದು
ಅದರ ಪರಿವೆಯಿಲ್ಲ ಆಲೋಚನೆಯ ಕಡಲಿನಲಿ ತೇಲಿರುವ ನಿನಗೆ

ಈ ಬಿಸಿಲ ಬೇಗೆಯಲಿ ಏನಂತಾ ಯೋಚನೆ
ಯಾರು ಬಂದರೂ, ಯಾರು ಹೋದರೂ ನಿನಗೆ ಪರಿವೆಯಿಲ್ಲ
ಏನು ಆಲೋಚನೆ ಹುಡುಗಿ... ಮನದಲ್ಲಿ ಮೂಡಿರುವ ಕದನವೇನು

ಕೈಯಲ್ಲಿ ಹಾಕಿರುವ ಮದರಂಗಿಯ ಬಣ್ಣ ಮಾಸಲು ಆಗುತಿಹುದು
ರವಿತೇಜನ ಕಿರಣಗಳು ಶಾಂತವಾಗಿಹುದು,
ನೀನಿಲ್ಲ ಈ ಲೋಕದಲ್ಲಿ, ಮುಳುಗಿರುವೆ ಆಲೋಚನೆಯ ಲೋಕದಲ್ಲಿ

ನೆಟ್ಟ ದ್ರುಷ್ಟಿಯನೋಟ, ಯಾರಿಂದಲೂ ಕದಲಿಸಲಾಗದ ಏಕಚಿತ್ತ
ಪುಟ್ಟ ವಯಸಿನ ಬಾಲೆ, ನಿನ್ನ ಮನದಲಿ
ಮೂಡಿರುವ ಯೋಚನೆಗಳ ಸರಮಾಲೆ...

Tuesday, April 24, 2007

ನಾ ಕಂಡೆ...

ಕಂಡೆ ನಾ ಇಂದು ನಿನ್ನ ರೂಪವನು ಪ್ರಕೃತಿಯ ಕಣ ಕಣದಲ್ಲೂ
ಕೊಳಲ ಮಧುರ ಗಾನದಲ್ಲಿ ನಿನ್ನ ದನಿಯ ಕಂಡೆ...

ಝುಳು ಝುಳು ಹರಿಯುವ ನೀರಿನಲ್ಲಿ ನಿನ್ನ ನಗುವ ಕಂಡೆ
ಹಕ್ಕಿಗಳ ಕಲರವದಿ ನಿನ್ನ ಪಿಸುಮಾತ ಕಂಡೆ...

ತೇಲಿಬರುವ ತಂಗಾಳಿಯಲಿ ನಿನ್ನ ಸ್ಪರ್ಶವ ಕಂಡೆ
ಬೆಳದಿಂಗಳ ಚಂದಿರನಲ್ಲಿ ನಿನ್ನ ಬಿಂಬವಕಂಡೆ...

ನೇಸರನ ಸೊಬಗಿನಲ್ಲಿ ನಿನ್ನಯ ನೋಟವ ಕಂಡೆ
ಮಲ್ಲಿಗೆಯ ಸುಗಂಧದಲಿ ನಿನ್ನ ಕಂಪನು ಕಂಡೆ...

ತುಂತುರ ಮಳೆಯ ಹನಿಯಲ್ಲಿ ನಿನ್ನಯ ನೆನಪ ಕಂಡೆ
ಮುಂಜಾನೆಯ ಮಂಜಿನಲಿ ನಿನ್ನಯ ಸಾಮಿಪ್ಯವ ಕಂಡೆ...

ಕಲ್ಪನೆಯು ಕನ್ಯೆ…



ಕಾದಿರುವುದೀ ಮನ ನಿನ್ನ ಬರುವಿಕೆಗಾಗಿ
ಕಾಯುತಿದೆ ಈ ಹೃದಯ ನಿನ್ನೊಲುಮೆಗಾಗಿ..

ನಿನ್ನ ಕಲ್ಪನೆಯದೊಂದು ಚಿತ್ರವನು ಹೃದಯದಿ ಹೊಂದಿರುವೆನು
ನಿನ್ನಂದವನು ನಾ ಕಂಡಿಲ್ಲ, ನಿನ್ನಯ ಚೆಲುವನ್ನು ಸೃಷ್ಟಿಕರ್ತನೇಬಲ್ಲನು…

ನನ್ನ ಕಲ್ಪನೆಯ ಬೆಡಗಿ ನೀ ಹೀಗಿರಬಹುದೆಂದು
ಚಿತ್ರಿಸಿರುವೆ ನಿನ್ನದೇ ರೂಪವನೊಂದು…

ಮುದ್ದಾದ ಸವಿಮಾತು ನನ್ನ ಕಿವಿಗೆ ಸಾಕು
ಮನಬಿಚ್ಚಿ ಮಾತಾಡೆ ಬೇರೇನು ಬೇಕು…

ಒಮ್ಮೊಮ್ಮೆ ಮೌನದಲಿ ಮಾತಾಡೆ
ಮತ್ತೊಮ್ಮೆ ಮಾತಿನಲಿ ಮೌನವ ಕಾಣೆ…

ಸೂರ್ಯ ರಶ್ಮಿಯ ತೇಜ ನಿನ್ನ ಕಣ್ಣು
ಮನದ ಮಾತನು ಅರಿವ ಮುಗ್ದ ಮನಸಿನ ಹೆಣ್ಣು…

ಉದ್ದವಾದ ದಟ್ಟ ಕಪ್ಪು ಕೂದಲು ನೀ ಹೊಂದಿರೆ
ಮುಖದ ಮೇಲಿನ ಮುಂಗುರುಳು ಮೋಡಿಯ ಮಾಡಿರೆ…

ನೀನಿರಬೇಕು ಎನ್ನಬಾಳಿನ ಸಂಗಾತಿಯಾಗಿ
ನಿನ್ನ ನಾ ಕಾಯುವೆ ಜೀವದ ಉಸಿರಾಗಿ…

ತೇಲಿಬಿಡು ನಿನ್ನ ನಗು ಸಮುದ್ರದ ಅಲೆಯಂತೆ
ನಗುನಗುತಾ ಬಾಳಿರೆ ಜೀವನದಿ ನಿಶ್ಚಿಂತೆ…

ಮಲ್ಲಿಗೆಯ ಕಂಪನು ಸೂಸು ನಮ್ಮಯ ಗೂಡಿನೊಳಗೆ
ನಲ್ಮೆಯ ಬಾಳನು ನಡೆಸುವ ಈ ಲೋಕದೊಳಗೆ…

ಮಾತೆ ತೋರುವ ಮಮತೆ ನಿನ್ನೊಳು ಇರಲಿ
ನಿನ್ನ ಹೃದಯದ ತುಂಬಾ ಕರುಣೆ ನೆಲೆಸಿರಲಿ…

ಎಲ್ಲರಲಿ ಬೆರೆನೀನು, ಮಾಡು ಮಾತಿನ ಮೋಡಿ
ನಿನ್ನ ಎಲ್ಲ ಗುಣವನು ಸಂತಸ ಪಡಬೇಕು ನೋಡಿ…

ನಾನಿಲ್ಲಿ ಬಣ್ಣಿಸುವ ಗುಣವೆಲ್ಲಾ ಒಬ್ಬಳಲಿ ಸಿಗುವುದು ಕಷ್ಟ
ಅವಳ ಬಳಿ ಇಲ್ಲದಿರೆ ಈ ಗುಣಗಳು, ಅದ ತುಂಬಲು ನನಗಿಷ್ಟ…

ಪಂಜರದ ಪಕ್ಷಿ



ಪಂಜರದ ಹಕ್ಕಿಯೊಂದು ಕೂಗುತ್ತಲಿತ್ತು
ಪುಟ್ಟ ಗೂಡಿನಲಿ ಹಾಡುತ್ತಲಿತ್ತು...

ಬೆಳಗಾಯಿತೆಂದರೆ ಆ ಪಂಜರದ ಪ್ರಪಂಚ
ನಾ ಹಾಕುವ ಕಾಳೇ ಸಾಕು ಅದಕೆ ಕೊಂಚ...

ಅದು ಹುಟ್ಟಿದುದು ಇಲ್ಲೇ, ಬಾಳಿದುದು ಇಲ್ಲೇ
ಬಹುಶಃ ಅದರ ಜೀವನವೆಲ್ಲಾ ಇಲ್ಲೇ...

ಹಾಗೆಂದು ನಾನು ನನೆಯುತಿರುವಾಗಲೇ
ಹಾರಿಹೋಯಿತು ಒಂದು ಪಕ್ಷಿ ಕಣ್ಣ ಎದುರಿನಲ್ಲೇ...

ನಾ ಹೊರಟೆ ಅದನು ಕಾಪಾಡಲು
ಬರುವ ಸಂಕಟದಿಂದ ಅದನು ಪಾರುಮಾಡಲು...

ಹಾರಿತೆನ್ನ ಪಕ್ಷಿ ದೂರ ಗಗನದೆಡೆಗೆ
ಅರಿಯದೆ ತನ್ನ ಜೀವನದ ಅಂತಿಮ ಘಳಿಗೆ...

ಅದರ ಮನದಲಿ ಇದ್ದಿರಬಹುದೇನೋ ಕಾತರ
ಪೂರ್ಣ ಆಗಸದಿ ಹಾರುವ ಅವಸರ...

ಆದರೆ ವಿಧಿಯ ಬರಹ ಬೇರೆಯೇ ಇತ್ತು
ಆಗಸದಿ ಒಂದು ಹದ್ದು ಆಹಾರಕೆ ಕಾದಿತ್ತು...

ನನ್ನ ಪಕ್ಷಿ ಹಾರಲಾಗಲಿಲ್ಲ ಗಗನದಿ ಎತ್ತರಕೆ
ಸೋತು ಹೋಯಿತು ನನ್ನ ಪಕ್ಷಿ ಜೀವನಕೆ...

ನನ್ನ ಪಕ್ಷಿ ಹದ್ದಿಗೆ ಆಹಾರವಾಯ್ತು
ಅದರ ಪಂಜರದ ಜೀವನ ಮುಕ್ತಾಯವಾಯ್ತು...

ಬಿಸಿಲ ಬೇಗೆ...



ಭುವಿಯೇ ಹತ್ತಿ ಉರಿದಂತೆ ಭಾಸವಾಗುತಿಹುದಿಂದು
ಸುತ್ತ ಕಣ್ಣಾಡಿಸಿದರೂ ಕಾಣದು ಮೋಡದ ತುಣುಕೊಂದು...

ಬೀಸಿ ಬರುವುದು ಗಾಳಿ ಶಾಖವ ಹೊತ್ತು
ಜ್ವಾಲೆಯ ಶಾಖದ ಪರಿಯ ಅನುಭವಿಸಿದರೇ ಗೊತ್ತು...

ಬತ್ತಿಹೋಗಿಹುದು ನೋಡು ಕೆರೆ, ತೊರೆ, ಜಲರಾಶಿಯು
ಸಾಯುತಿಹುದು ನೋಡು ಅದರ ಒಡಲಿನ ಜೀವರಾಶಿಯು...

ಸಂಜೆಯಾಯಿತೆಂದರೇನು, ತಂಪುಗಾಳಿ ಇಲ್ಲ ನಿನಗೆ
ಅನುಭವಿಸಲೇ ಬೇಕು ಸೂರ್ಯಕಿರಣಗಳ ಧಗೆ...

ದಿನನಿತ್ಯವೂ ಬೆವರಿನ ಜಳಕವ ನೀ ಮಾಡಬೇಕು
ನಿನಗೆ ಸಿಗುವ ಬಿಸಿನೀರಿನಿಂದ ದಾಹ ನೀಗಬೇಕು...

ಬಿರುಬಿಸಿಲ ಬೇಗೆಯ ಪರಿಯ ಹೇಳುತಿಹೆನಿಂದು
ಈ ಬಿಸಿಲ ತಾಪವನು ಅನುಭವಿಸಿದವ ನಾನೆಂದು...

Monday, April 23, 2007

ಕುಕ್ಕರಹಳ್ಳಿ ಕೆರೆ



ನೋಡಬನ್ನಿರಿ ನೀವು ನಮ್ಮೂರ ಕೆರೆಯ
ನಿಸರ್ಗದ ಸೊಬಗಿನ ಒಲುಮೆಯ ಅಂಗಳವ
ನೀವಿಲ್ಲಿ ಕಾಣುವಿರಿ ನಿಸರ್ಗದ ಸಿರಿಯ
ಚಿಮ್ಮೆಂದು ಜಿಗಿದು ಈಜುವ ಮತ್ಸ್ಯರಾಶಿಯ

ಬೆಳಗಿನ ಓಟಕಿದು ಮಾಡಿಟ್ಟ ಸ್ವರ್ಗ
ಮನಸ್ಸಿನ ಶಾಂತಿಗಿದು ಸರಿಯಾದ ಮಾರ್ಗ
ಕಾಣಿರಿ ಇಲ್ಲಿನ ಪುಟ್ಟ ಉದ್ಯಾನವನವ
ನಿಸರ್ಗದ ಬಣ್ಣಗಳ ಸರಿಯಾದ ಮಿಶ್ರಣವ

ದೋಣಿವಿಹಾರದ ಉಲ್ಲಾಸ ಹೊಂದಿರಿ
ದೇಶವಿದೇಶಗಳ ಪಕ್ಷಿಯನು ಕಾಣಿರಿ
ದಿನನಿತ್ಯ ಇಲ್ಲಿಗೆ ಬರುವ ಮಂದಿ ನೂರಾರು
ಬಂದು ಮರೆವರಿಲ್ಲಿ ತಮ್ಮ ತಂಟೆ ತಕರಾರು

ಕವಿಗಳಿಗೆ ಸ್ಪೂರ್ತಿಯನು ನೀಡಿದ ಕೆರೆಯು
ಯುವ ಸೈನಿಕರ ತರಬೇತಿಯ ತಾಣವು
ಪ್ರೇಮಿಗಳು ಬರೆವರು ಪ್ರೇಮದ ಮುನ್ನುಡಿಯ
ಸುತ್ತುತಾ ಸವಿಯುತಾ ಇದರ ಸೌಂದರ್ಯವ

ಇದುವೇ ನಮ್ಮೂರ ಹೆಮ್ಮೆಯ ಕೆರೆಯು
ಒಮ್ಮೆ ಭೇಟಿ ಕೊಡಿ ಇದು ಪ್ರಕೃತಿಯ ಕರೆಯು...

Saturday, April 21, 2007

ಜೋಡಿ ಹಕ್ಕಿಗಳು...


ನನ್ನ ಎಲ್ಲಾ ಓದುಗರಿಗೆ ಮತ್ತೆ ನನ್ನ ಆತ್ಮೀಯ ಗೆಳೆಯರಿಗೆ ನನ್ನ ಹೃದಯ ಪೂರ್ವಕ ನಮನ... ನಾನು ಈ ಕವನ ಬರಿಯೊದಕ್ಕೆ ಅಂತರ್ಜಾಲದಲ್ಲಿ ಬಂದಿದ್ದ ಒಂದು ಪುಟ್ಟ ಜೋಡಿ ಹಕ್ಕಿಗಳ ಕಥೆ ಮತ್ತೆ ನನ್ನ ಕಣ್ಮುಂದೆ ನಡೆದ ನಿದರ್ಶನಕೂಡಾ... ಇದು ಹೈದರಾಬಾದಿನಲ್ಲಿ ನಡೆದಿದ್ದು. ನೋಡಿ ನಿಮ್ಮ ಅಭಿಪ್ರಾಯವನ್ನ ತಿಳಿಸಿ-ನಿಮ್ಮ ಸ್ನೇಹಿತ.


ಪುಟ್ಟ ಹಕ್ಕಿಗಳ ಜೋಡಿ ಮೇಲೆ ಹಾರಿತ್ತು
ಸಂತಸದಿ ಆಗಸದ ತುಂಬಾ ತೇಲಿತ್ತು...

ಜಗದಲಿರುವ ದುಃಖ ದುಮ್ಮಾನಗಳ
ಮುಂದೆ ಬಂದೊದಗುವ ಕಷ್ಟ ಕಾರ್ಪಣ್ಯಗಳ...

ಏನನ್ನೂ ಲೆಕ್ಕಿಸದೆ ನೀಲಾಕಾಶದಿ ವಿಹರಿಸಿತ್ತು
ಪುಟ್ಟ ಹಕ್ಕಿಗಳ ಜೋಡಿ ಗಾಳಿಯಲಿ ತೇಲಿತ್ತು...

ಬಂದೊದಗಿದ ಅಡ್ಡಗಳದಾಂಟಿ ಸಾಗಿತ್ತು
ವೇಗದ ಗಾಳಿಯ ಮೀಟಿ ಹಾರಿತ್ತು...

ತಮ್ಮ ಗೂಡಿನ ಆಸೆಯ ಮನದಲಿರಿಸಿ
ಹೊರ್‍ಅಟಿದ್ದವೀಜೋಡಿ ನಲೆಯನರಸಿ...

ನೆಲೆಯ ಹುಡುಕುತ ಹೊರಟ ಜೋಡಿಗಳಿಗೆ
ಕಾದಿತ್ತು ಒಂದು ಕೆಟ್ಟ ಗಳಿಗೆ...

ನಗರದ ವಾತಾವರಣದಿ ಹಾರುತಾ ಹೆಣ್ಣು
ಬಿದ್ದಿತ್ತು ಅದರಮೇಲೆ ಸಾವಿನ ಕಣ್ಣು...

ವಿಧಿಯ ಆಟದಿ ಹೆಣ್ಣು ಕೆಳಗೆ ಬಿದ್ದಿತು
ಅದ ನೋಡಿದ ಗಂಡು ವಿರಹದಿಂದ ಗೋಳಾಡಿತ್ತು...

ಹಕ್ಕಿಯದು ಬಿದ್ದಿತ್ತು ನಡುದಾರಿಯಲ್ಲಿ
ಅದರ ಮಿತ್ರನ ಕೂಗು ಕೇಳುವರಿಲ್ಲ ಇಲ್ಲಿ...

ವಿರಹದ ಬೇಗೆಯಲಿ ಬೆಂದು ಕೂಗಿತ್ತಾ ಗಂಡು
ಆಹಾರ ಸೇವಿಸದೇ ಗೆಳತಿಗಾದ ವ್ಯಥೆಯಕಂಡು...

ತ್ಯಜಿಸಿತ್ತು ಪ್ರಾಣ, ಮಾಡಿತ್ತು ಪಯಣ
ತನ್ನ ಗೆಳತಿಯ ಕಡೆಗೆ, ಮುಚ್ಚಿಕೊಂಡಿತ್ತು ಅದರ ನಯನ...

ಇದುವೇ ನೋಡಿ ಗೆಳೆಯರೇ ನಿಜವಾದ ಪ್ರೇಮ
ಬದುಕಿರುವ ಜೀವಿಗಳು ಸಾಯಲೇಬೇಕು, ಇದು ನಿಸರ್ಗದ ನಿಯಮ...

Friday, April 20, 2007

ನಮ್ಮೂರು...



ಸ್ನೇಹಿತರೇ, ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ನಮ್ಮೂರಿನ ಬಗ್ಗೆ ಎಲ್ಲಾಕನ್ನಡಿಗರಿಗೂ ಗೊತ್ತು. ಆದರೂ ನಾನು ನನ್ನ ಈ ಚಿಕ್ಕ ಕವನದಲ್ಲಿ ಅದರ ಸೌಂದರ್ಯವನ್ನ ವರ್ಣಿಸೊದಕ್ಕೆ ಪ್ರಯತ್ನ ಮಾಡಿದ್ದೀನಿ. ನಾನಿಲ್ಲಿ ನಮ್ಮ ಊರಿನ ಎಲ್ಲಾ ಪ್ರವಾಸಿ ತಾಣಗಳನ್ನ ಚಿತ್ರಿಸಲು ಆಗಿಲ್ಲದುದಕೆ ನಿಮ್ಮ ಕ್ಷಮೆ ಇರಲಿ......
***************************************************************

ನಾ ಹುಟ್ಟಿ ಬಂದದ್ದು ಮೈಸೂರಿನಿಂದ
ಹೇಳುವೆನು ನಿಮಗೆ ನಮ್ಮೂರ ಚೆಂದ...

ಕರುನಾಡ ಸಾಂಸ್ಕೃತಿಕ ರಾಜಧಾನಿಯಿದು
ಸಂಸ್ಕೃತಿಯ ಸಾಹಿತ್ಯದ ನೆಲೆಬೀಡಿದು...

ನೋಡಬನ್ನಿರಿ ನೀವು ಚಾಮುಂಡಿ ಬೆಟ್ಟವನು
ನಂದಿಯೂ ನಿಮಗಾಗಿ ಕಾದು ಕುಳಿತಿಹನು...

ಬೆಟ್ಟದ ತಪ್ಪಲಿನಲಿ ನಲೆದಿರುವ ಪಕ್ಷಿಗಳ ತಾಣ
ಅದುವೇ ನಮ್ಮ ಸುಂದರ ಕಾರಂಜೀ ಕೆರೆಯ ಬಿನ್ನಾಣ...

ಇತ್ತಬನ್ನಿರಣ್ಣ ಮೃಗಾಲಯಕೆ ಪಯಣ
ತೋರುವುದು ನಿಮಗೆ ಪ್ರಾಣಿ ಪ್ರಪಂಚವನ್ನ...

ಮುಂದೆ ಸಾಗಿ ನೋಡಿರಿ ನಮ್ಮ ರಾಜರ ಮನೆಯು
ಅದುವೆ ನಮ್ಮ ಊರಿನ ಚೆಂದದ ಅರಮನೆಯು...

ಅಲ್ಲಿಗೇ ಮುಗಿದಿಲ್ಲ ನಿಮ್ಮಯ ಪಯಣ
ಮುಂದಿನ್ನೂ ಕಾದಿಹುದು ಹಲವು ತಾಣ...

ಹಾಗೆ ಬನ್ನಿರಿ ನಮ್ಮ ಜಗನ್ಮೋಹನ ಅರಮನೆಗೆ
ಚಿತ್ರಕಲಾ ವೈಭವದ ಲೋಕದಿ ವಿಹರಿಸಲಿಕ್ಕೆ...

ಸಂಜೆಯಾಯಿತೆಂದರೆ ನೋಡು ಕೃಷ್ಣರಾಜ ಸಾಗರವ
ಬಣ್ಣಿಸಲು ಸಾಲದೀ ಕವನ ಅದರ ಅಪರಿಮಿತ ಅಂದವ...

ನೋಡಬೇಕು ನೀವು ಅದರ ನೃತ್ಯ ಕಾರಂಜಿಯನು
ಮೈಮರೆವಿರಿ ನೀವು ನಿಮ್ಮ ದುಗುಡ ದುಮ್ಮಾನವನು...

ಸಾಲುತಿಲ್ಲವೆನಗೆ ಈ ಸಣ್ಣ ಕವನವು
ವರ್ಣಿಸಲು ಎನಗೆ ನಮ್ಮ ಚೆಂದದ ಊರನು...

ಬನ್ನಿರೆನ್ನ ಮಿತ್ರರೇ ನಿಮ್ಮ ಗೆಳೆಯರೊಡಗೂಡಿ
ನನ್ನೂರು ನಿಮಗೆ ಮಾಡುವುದು ಮೋಡಿ...

Thursday, April 19, 2007

ಮುನಿಸು ತರವೇ...



ಸೌಮ್ಯ ನಮ್ಮ ಮನೆ ಹುಡುಗಿ. ತುಂಬಾ ಒಳ್ಳೇಗುಣ ಇದ್ರೂ ಯಾಕೂ ಏನೂ ಸ್ವಲ್ಪನೇ ಸ್ವಲ್ಪ ಬುಸ್ಸ್ ಅಂತಾಳೆ, ಯಾವಾಗ್ಲೂ ಅಲ್ಲ. ಅವಳಿಗಾಗಿ ನಾ ಬರೆದ ಕವನ ಇದು.... ಸೌಮ್ಯ ಈ ಬಡಪಾಯಿ ಮೇಲೆ ನಿನ್ನ ಕ್ಷಮೆ,ಕರುಣೆ,ದಯೆ ಇರಲಿ ಎಂದು ಕೋರುತ... ;)

ತರವಲ್ಲವೀ ಮುನಿಸು ನಿನಗೆ
ನಿನ್ನ ಮೊಗಕೆ ಚೆಂದ ಆ ಮುಗುಳ್ನಗೆ

ಮುನಿಸು ಏತಕೆ ನಿನಗೆ ನನ್ನೋಡನೆ ಹೇಳು
ಮುನಿಸುನಿನ್ನೊಡನಿರಲು ಸುಖವಿಲ್ಲ ಬಾಳು...

ತೆಗೆ ಮುನಿಸ ಮನಸಿಂದ, ಹೊಂದು ನೀ ಆನಂದ
ಧರಿಸುನೀ ನಗೆಯೊಂದ, ಕಿರುನಗೆಯ ಬೀರೋಂದ...

ಮುನಿಸು ಬಂದರೆ ನಿನಗೆ ತಾಳ್ಮೆಯನು ಕಳಿಸು
ನಗು ನಗುತ ನೀನು ಮುನಿಸನ್ನ ಜಯಿಸು...

ಹುಸಿಕೋಪವದು ಬರಲು ಒಮ್ಮೆ ನೀ ಸಹಿಸು
ಕೋಪವ ಓಡಿಸಲು ಮತ್ತೆ ಸಂಖ್ಯಗಳ ಎಣಿಸು...

ತಂದೆ ತಾಯಿಯು ಇಟ್ಟ ಹೆಸರ ಉದ್ದರಿಸು
ನಗು ನಗುತಲಿದ್ದರೇ ಈ ಬಾಳಿನಲಿ ಸೊಗಸು... :)

ಗರಿಗೆದರಿದ ನೆನಪು...



ಆತ್ಮೀಯ ಗೆಳೆಯರೆ/ಗೆಳತಿಯರೆ/ನನ್ನ ಕವನವನ್ನು ಓದುವ ಓದುಗರೆ,
ನಮ್ಮ ಜೀವನದಲ್ಲಿ ನನಪುಗಳು ಬಹಳ, ಅದು ಕೆಟ್ಟದಾಗಿರಬಹುದು ಅಥವ ಒಳ್ಳೇ ನೆನಪಿರಬಹುದು. ಆದರೆ ನೆನಪು ಪ್ರತಿಯೊಬ್ಬರಿಗೂ ಇದ್ದೆ ಇರತ್ತೆ. ನನು ಇಲ್ಲಿ ನನ್ನ ನೆನಪಿನ ಬಂಡಾರವನ್ನು ಸ್ವಲ್ಪ ನಿಮ್ಮ ಮುಂದೆ ತೆರೆದು ಇಡುತ್ತಿದ್ದೆನೆ. ನನ್ನ ಈ ಕವನಕ್ಕೆ ಮುಕ್ತಾಯ ಹಾಡೊದು ತುಂಬಾ ಕಷ್ಟ ಆಯ್ತು....
************************************************

ನೆನಪುಗಳ ಮಾತೆ ಮಧುರ, ಅದರಿಂದೆಕೊ ಮನಸಿಗೆ ಬೇಸರ
ನಾ ಕಳೆದ ಆ ಮಧುರ ನನಪ ತಂದಿಹನು ನಿಮ್ಮೆದುರ

ನಾಕಳೆದ ಬಾಲ್ಯದ ನೆನಪು, ಅದರಲಿ ಕಂಡ ಗೆಳೆಯರ ನೆನಪು
ಅವರೊಡಗೂಡಿ ನಲಿದಂತ ನೆನಪು, ಮಳೆಯಲಿ ನೆನೆದು ಮಿಂದ ನೆನಪು

ಶಾಲೆಯಲಿ ಗುರುಗಳ ಪದ್ಯದ ನೆನಪು, ನಾನೇ ಓದಿದ ಗದ್ಯದ ನೆನಪು
ಕಥೆಯನು ಹೇಳಿದ ಹೆಮ್ಮೆಯ ನೆನಪು, ಆಟದಿ ಸೊತು ಅತ್ತಂತಾ ನೆನಪು

ನೆಂಟರ ಮನೆಯಲಿ ಮೌನದ ನೆನಪು, ನಮ್ಮ ಮನೆಯಲಿ ಸವಿ ಮಾತಿನ ನೆನಪು
ಸೈಕಲ್ ಕಲಿಯಲು ಹೊದ ನೆನಪು, ಬಿದ್ದು ಗಯವ ಮಾಡಿಕೊಂಡ ನೆನಪು

ಗೆಳತಿಯೊಡಗೂಡಿ ಅಡಿದ ನೆನಪು, ನಾಚಿ ಮನೆ ಕಡೆಗೆ ಓಡಿದ ನೆನಪು
ಕಡ್ಡಿಯನಿಟ್ಟು ಕ್ರಿಕೇಟ್ ಆಡಿದ ನೆನಪು, ಚೆಂಡಿನಿಂದ ಕಿಟಕಿಯ ಒಡೆಸಿದ ನೆನಪು

ಮನೆಯಲಿ ಕೊಪವ ಮಾಡಿದ ನೆನಪು, ಅಪ್ಪಗೆ ಸಿಟ್ಟನು ತರಿಸಿದ ನೆನಪು
ಸಿಟ್ಟಲಿ ಪೆಟ್ಟನು ತಿಂದ ನೆನಪು, ಅಮ್ಮನ ಪ್ರೀತಿಯ ಪಡೆದಂತಾ ನೆನಪು

ಹಳೆಯ ಸೈಕಲ್ ಕೊಂಡ ನೆನಪು, ಅದರಿಂದೊಮ್ಮೆ ಬಿದ್ದ ನೆನಪು
ಹಾರ್ಲಿಕ್ಸ್ ಶೀಶೆಯಲ್ಲಿ ಮೀನಿಟ್ಟ ನೆನಪು, ಮೊಟ್ಟ ಮೊದಲಿಗೆ ಗಿಡ ನೆಟ್ಟ ನೆನಪು

ಶಾಲೆಯಲಿ ಸ್ಪರ್ಧೆಗೆ ಸೆರಿದ ನೆನಪು, ಅಂಜುತ ಅಂಜುತ ಹಾಡಿದ ನೆನಪು
ಪುಸ್ತಕದೊಳಗೆ ಕೋಳಿ ಪುಕ್ಕವನಿಟ್ಟ ನೆನಪು, ಮಳೆಯಲಿ ಪುಸ್ತಕ ನೆನೆಸಿದ ನೆನಪು

ಮುಗಿದಿಲ್ಲವೀ ನನ್ನ ನೆನಪಿನ ಗುಚ್ಚವು
ತಂದಿಡುವೆನು ನಿಮ್ಮೆದುರಿಗೆ ಮತ್ತೊಮ್ಮೆ ಸಿಕ್ಕರೆ ಸಮಯವು...

ನನ್ನ ಗೆಳೆಯರು



ನನ್ನ ಗೆಳೆಯರ ಬಗ್ಗೆ ಕವಿತೆಯೂಂದ ಬರೆದೆ
ಅವರ ವರ್ಣಿಸಲು ಪದಗಳ ಮರೆತೆ...

ನೋಡಿರೆನ್ನ ಗೆಳೆಯರ, ಗೆಳೆಯರಲ್ಲ ಅಮೂಲ್ಯ ರತ್ನಗಳಿವು
ಒಬ್ಬರಿಗಿಂತೊಬ್ಬರು, ಬಾಳ ಮೈಲಿಗಳಿವು...

ಒಬ್ಬನಿಹನಿಂದು ಸ್ಪೂರ್ತಿಯ ಅಲೆಯಾಗಿ
ಮತೊಬ್ಬ ಬಂದಿಹನು ಸಹನೆಯ ನೆಲೆಯಾಗಿ...

ನನ್ನ ಗೆಳೆಯರು ಎನ್ನ ಜೊತೆಯಲೇ ಇರುವರೆಂದು
ನೆನೆದರೆ ಮನದಲಿ ಕಣ್ತುಂಬಾ ಇವರ ಬಿಂದು...

ಜೀವನದಿ ಇರಬೇಕು ಸ್ನೇಹದಾ ಬಾಳ್ವೆ
ಆಗಲೇ ನೀ ಕಷ್ಟಗಳ ಸರಮಾಲೆ ಗೆಲ್ವೆ...

ನನ್ನ ಗೆಳೆಯರ ನೋಡಿ ಸದಾ ಹಿತಚಿಂತಕರು
ಕಷ್ಟ ಕಾರ್ಪಣ್ಯವ ಕೊಲ್ವ ಆಪ್ತ ಹಂತಕರು...

ನಾ ಹುಟ್ಟಿ ಬೆಳೆದಂತೆ ಕಂಡಿಹೆನು ಸ್ನೇಹವಾ
ಇವರಿರದ ಬದುಕನ್ನ ನನೆಯುವುದು ಅಸಾಧ್ಯ...

ನಾನಿರುವೆ ಕೊನೆತನಕ ನಿಮ್ಮ ಸ್ನೇಹಿತನಾಗಿ
ನಿಮ್ಮ ಕಷ್ಟಕಾಲಕೆ ನಾನಿರುವೆ ನೆರಳಾಗಿ...

ಬದುಕೆಂಬ ಪಯಣದಿ ನಿನೊಬ್ಬ ಪಯಣಿಗ
ಸ್ನೆಹಿತರೊಡಗೂಡೆ ಪಯಣವಿದು ನಿರಾತಂಕ...

********ನಿಮ್ಮ ಸ್ನೇಹಿತ**********

ಮೌನ



ಎನ್ನೊಡನೆ ಮಾತಾಡು ಬಿಮ್ಮೆನುತಿಹುದೀ ಮನ
ನಿನ್ನ ಮಾತಿಲ್ಲದೆ ಬೇಸರದಿ ಕೂಡಿದೆ ಈ ದಿನ...

ನೀ ಮಾತಾಡುತಿರೆ ಮುತ್ತುಗಳ ಸಾಲು ಧರೆಗಿಳಿದಂತೆ
ನೀ ಮೌನವಾಗಿರೆ ಕೋಲ್ಮಿಂಚಿನ ರಭಸ ಶಬ್ಧವಿಲ್ಲದಂತೆ...

ಎನ್ನಮನದಲಿ ಮೂಡಿಹುದು ಹೇಳತೀರದ ನೋವದು
ನಿನ ಸವಿನುಡಿಗೆ ಕಾಯುತಿಹ ಪುಟ್ಟ ಮನಸಿದು...

ನೀ ಮಾತಾಡೆ ಹೆಜ್ಜೆನ ಸವಿದಂತೆ
ನೀ ಮೌನವಾಗಿರೆ ಕಾರ್ಮೋಡ ಕವಿದಂತೆ...

ಹೇಳತೀರದು ನೋಡು ಎಂಥಹಾ ಮೌನ
ಹೇಳು ನಿನ್ನಯ ದುಃಖ ದುಮ್ಮಾನ...

ಕಾದಿಹುದು ಈ ಕರ್ಣ ನಿನ್ನ ನುಡಿಯ ಕೇಳಲು
ತೆರೆಮನದ ಆವರಣ ಸವಿಮಾತ ನುಡಿಯಲು...

Wednesday, April 18, 2007

ಆಸೆ



ಹಕ್ಕಿಗೆ ಗೂಡನು ಕಟ್ಟುವ ಆಸೆ
ಗೂಡಲಿ ಮರಿಯನು ನೋಡುವ ಆಸೆ
ಮರಿಗೆ ಎತ್ತರ ಹಾರುವ ಆಸೆ
ಆಸೆ ಇರಬೇಕು ಜಗದೊಳಗೆ...

ದೇವರಿಗೂ ಕೂಡಾ ಇರುವುದು ಆಸೆ
ತನ್ನ ಭಕ್ತರನು ಕಾಯುವ ಆಸೆ
ಒಳ್ಳೆಬುದ್ದಿಯನು ಕರುಣಿಸುವ ಆಸೆ
ಆಸೆ ಇರಬೇಕು ಜಗದೊಳಗೆ...

ದುಂಬಿಗೆ ಹೂವನು ಕಂಡರೆ ಆಸೆ
ಹೂವಿನ ಮಕರಂದ ಹೀರುವ ಆಸೆ
ಹೂವಿಂದ ಹೂವಿಗೆ ಹಾರುವ ಆಸೆ
ಆಸೆ ಇರಬೇಕು ಜಗದೊಳಗೆ...

ಆಕಳಕರುವಿಗೆ ತಾಯಿಯ ಆಸೆ
ತಾಯಿಗೆ ತನ್ನ ಕರುಳಿನ ಆಸೆ
ಅದಕೆಹಾಲುಣಿಸಿ ಸಂತಸ ಹೊಮ್ಮುವ ಆಸೆ
ಆಸೆ ಇರಬೇಕು ಜಗದೊಳಗೆ...

ಸನ್ಯಾಸಿಗೂ ಕೂಡಾ ಇರುವುದು ಆಸೆ
ದೇವನೊಬ್ಬನನ ನೋಡುವ ಆಸೆ
ಅವನಲಿ ಲೀನವಾಗುವ ಆಸೆ
ಆಸೆ ಇರಬೇಕು ಜಗದೊಳಗೆ...

ಗಿಡಕೆ ಮರವಾಗಿ ಬೆಳೆಯುವ ಆಸೆ
ಮರವಾಗಿ ಬೆಳೆದು ಹಣ್ ಬಿಡುವ ಆಸೆ
ಅದರಿಂದೋಂದು ಗಿಡಬೆಳೆಸುವ ಆಸೆ
ಆಸೆ ಇರಬೇಕು ಜಗದೊಳಗೆ...

ಪ್ರೇಮಿಗೆ ಪ್ರಿಯಕರನ ನೋಡುವ ಆಸೆ
ಪ್ರಿಯಕರನ ನೋಡುವ ಆಸೆ
ಅವನೊಡನೆ ಮಾತಾಡುವ ಆಸೆ
ಆಸೆ ಇರಬೇಕು ಜಗದೊಳಗೆ...

ಅಮ್ಮಗೆ ಮಗುವನು ಕಾಣುವ ಆಸೆ
ಮಗುವದು ಮಾತಾಡೆ ಇನ್ನೂ ಆಸೆ
ಎಂದಿಗೆ ನಡೆವುದೊ ಎಂಬ ಆಸೆ
ಆಸೆ ಇರಬೇಕು ಜಗದೊಳಗೆ...

ಸರಳಜೀವಿಗೂ ಇರುವುದು ಆಸೆ
ದುಂದುವೆಚ್ಚವ ಮಾಡದ ಆಸೆ
ಸಾರ್ಥಕ ಜೀವನ ನಡೆಸುವ ಆಸೆ
ಆಸೆ ಇರಬೇಕು ಜಗದೊಳಗೆ...

ಆಸೆ ಇರಬೇಕು ಜಗದೊಳಗೆ...
ಇದ್ದರೆ ಚೆನ್ನ ಮಿತಿಯೊಳಗೆ...

Tuesday, April 17, 2007

ಕನಸುಗಳ ಮಳೆಯಲ್ಲಿ



ಕನಸುಗಳ ಮಳೆಯಲ್ಲಿ ನಾ ಮಿಂದು ಬಂದೆ
ನಿಮ್ಮಗೆಲ್ಲ ನಾಕಂಡ ಕನಸನ್ನು ಹಂಚಲೆಂದೆ...

ಕಂಡೆನಾ ಕನಸೊಂದ ಮಧ್ಯರಾತ್ರಿಯಲಿ
ಗುಬ್ಬಿಗಳ ಸವಿಗಾನ ನಮ್ಮ ಊರಿನಲಿ...

ಕಂಡೆನಾ ಕನಸೊಂದ ಬೆಳಗಿನ ಜಾವದಲಿ
ಕೆರೆ ಕಟ್ಟುವ ಯತ್ನ ಮರುಭೂಮಿಯಲಿ...

ಕಂಡೆನಾ ಕನಸೊಂದ ಪೂರ್ಣ ಬೆಳದಿಂಗಳಲಿ
ಬೆಳೆದಿತ್ತು ಹಸಿರಸಾಲು ನಮ್ಮ ನಗರದಲಿ !!!

ಕಂಡೆನಾ ಕನಸೊಂದ ಪ್ರಶಾಂತ ಇರುಳಿನಲಿ
ಸಿಕ್ಕಿದಹಾಗೆ ಪೂರ್ಣ ಶುದ್ಧ ಜಲ ಗಂಗಾನದಿಯಲಿ...

ನಾ ಕಂಡೆ ಕನಸೊಂದ ಬೆಚ್ಚನೆಯ ಹಾಸಿಗೆಯಲಿ
ಪಡೆದಿದ್ದೆ ಶುದ್ಧ ವಾಯು ನಮ್ಮ ಊರಿನಲಿ...

ಆಗಲಿ ನಾಕಂಡ ಕನಸೆಲ್ಲ ನನಸು
ಸುಂದರವಾಗಲಿ ನಮ್ಮೆಲ್ಲರ ಬಾಳು, ಬದುಕು...

ನಮ್ ಉಡ್ಗಿ - ಮಸ್ತ್ ಉಡ್ಗಿ

ನಮ್ ಉಡ್ಗಿ ಮ್ಯಾಲೆ ಒಂದು ಪುಟ್ಟ ಪದ....
----------------------------------------------------
ನೋಡಕ್ಕ್ ಮಾತ್ರ ಬಿದಿರಿನ ಕಂಬಾ...
ಮನಸ್ಸು ಕೂಡ ಅದರಂಗೆ...
ಗಟ್ಟಿ ಮನಸ್ಸಿನ ಮುಖ್ವಾಡ ಹಾಕ್ತಾ...
ಇರ್ತಾಳೆ ಬಿದಿರಿನ ಟ್ಓಲ್ಲ್ ಅಂಗೆ...

ಈ ಪಾಟಿ ಎತ್ತರಾಕ್ಕ್ ಇದ್ರೂ
ಒಂಚೂರು ಇಲ್ಲ ಜಂಭ...
ನೊಂದ ಮನಸ್ನ್ ಸರಿ ಮಾಡ್ಲಿಕ್ಕೆ
ಇವ್ಲೇ ಆಧಾರ ಸ್ಥಂಭ......

ಸನ್ದಕಿ ಹಾಡ್ತಾಳೆ
ಸನ್ದ್ಆಕಿ ಕೂಣಿಸ್ತಾಲೆ ಮೈನಾ.....
ನಾಜೂಕ್ ಉಡ್ಗಿ ಅನ್ ಕೊಂಬ್ಯಾಡ್ರಿ....
ಬುಡ್ತಾಲ್ ನಿಮ್ಮೆಲ್ ಬೈಕ್ ನಾ........

ಸಣ್ನ್ ಸಣ್ನ್ ವಿಷ್ಯಕ್ಕ್ ಮುನಿಸ್ಕಂಡ್ ಇವ್ಳು
ಒಗ್ತಾಲ್ ಮೈಲೀ ಉದ್ದ....
ಅಂಗೆ ತ್ ಇರ್ಗಿ ಬಂದ್ ಬುಡ್ತಾಳೆ
ಸುಮ್ ಕಿರು ನೀನು ಪೆದ್ದ......

ಬಣ್ಣ ಬಣ್ಣದ್ ಚಿತ್ರ ಬಿಡ್ಸೋವಂತ
ಚಂದುಳ್ಲಿ ಚೆಲುವೆ ಇವ್ಳು...
ಇವ್ಳ ಬಾಳು ಕೂಡ ಇಂಗೆ ಇರ್‍ಲಿ
ಅಂತ ಹರಿಸ್ತ್ ಇವ್ನಿ ನಾನು...
---------------------------------------------------

ಹಕ್ಕಿಯೊಂದು ಗೊಡಕಟ್ಟಿತ್ತು…



ಹೊರಟಿತೊಂದು ಹಕ್ಕಿ ತನ್ನ ಗೂಡಕಟ್ಟಲು
ತನ್ನ ಗೆಳತಿಗಾಗಿ ಒಂದು ಮನೆಯ ಮಾಡಲು…

ಹಕ್ಕಿ ಗೂಡಕಟ್ಟಲೊಂದು ಮರವ ಆರಿಸಿ
ಮತ್ತೆ ತನ್ನ ಪ್ರೇಯಸಿಯ ಮನವ ಒಲಿಸಿ…

ಈ ಹಕ್ಕಿ ಕಷ್ಟಪಟ್ಟು ಕಡ್ಡಿಗಳ ತರಲು
ತನ್ನ ಗೂಡಿನ ಸವಿಗನಸ ಕಾಣುತಲಿರಲು…

ಮೇಲೆ ಹಾರಿ ಆಗಸದಿ ತೂರಿ ಕನಸುಗಳ ಮಾಲೆ ಜೋಡಿಸಿ
ದೂರ ದೂರದಿಂದ ತಂದ ಕಡ್ಡಿಗಳ ಜೋಡಿಸಿ…

ಮರದಮೇಲೆ ಕಟ್ಟಿತೊಂದು ಗೂಡನು ಹಕ್ಕಿ
ಕಷ್ಟಪಟ್ಟು ತಂದ ಕಡ್ಡಿಗಳ ಹೆಕ್ಕಿ ಹೆಕ್ಕಿ…

ತನ್ನ ಮನೆಯ ತನ್ನ ಮರಿಯ ಕನಸ ಕಾಣಲು
ಆದರೇನು ವಿಧಿಯ ಆಟ ಬೇರೆಯೇ ಇರಲು…

ಭೂಮಿಯಂಚಿನಿಂದ ಗಾಳಿ ಬೀಸುತ ಬರಲು
ಗಾಳಿ ಮಳೆಗೆ ಛಿದ್ರವಾಯ್ತು ಹಕ್ಕಿಯ ಗೂಡು…

ಸಿಡಿಲಿನಬ್ಬರಕೆ ಬಲಿಯಾಯ್ತು ಹಕ್ಕಿಯ ಗೂಡು
ಪಾಪ ಹಕ್ಕಿ ಕಂಡ ಕನಸಾಯ್ತು ನುಚ್ಚುನೂರು…

ಆದರೇನು ಬಿಡದೆ ಛಲವ ಹಕ್ಕಿ ಹಾರಿತು
ಅದರ ಗೆಳತಿಯೊಡನೆ ಸೇರಿ ಗೂಡ ಕಟ್ಟಿತು…

ಗಾಳಿ ಮಳೆಗೆ ಅಳುಕದಂತ ಗಟ್ಟಿ ಗೂಡದು
ಮಧುರ ಒಲುಮೆ ಪ್ರೀತಿ ಬೆರೆತ ದೊಡ್ಡ ಗೂಡದು…

Monday, April 16, 2007

ಮಹಾನಗರದ ಪ್ರಗತಿ



ಮಹಾನಗರದೊಳಗೊಮ್ಮೆ ನೀ ಬಂದು ನೋಡು
ಹೇಗಿತ್ತು ಹೇಗಾಯ್ತು ನಮ್ಮ ಚೆಲುವ ನಾಡು...

ದೊಡ್ಡ ದೊಡ್ಡ ರಸ್ತೆಗಳು ನೋಡಲದು ಸುಂದರ
ಅದರ ಮೇಲೆ ಸಂಚರಿಸು, ಅದರಲಿಹುದು ಕಂದರ...

ವಾಹನಗಳ ಸಾಲು ಸಾಲು ನೋಡು ರಸ್ತೆಯುದ್ದಕೂ
ಒಂದೇ ಒಂದು ಮರವೂ ಇಲ್ಲ ರಸ್ತೆಯುದ್ದಗಲಕೂ...

ಮೊದಲು ಇಲ್ಲಿ ಇದ್ದವಂತೆ ಗುಬ್ಬಿ ಕಾಗೆ ಪಕ್ಷಿಯು
ಇಂದು ನಿನಗೆ ಕಂಡರಿವು ನಿನಗದೇ ಅದೃಷ್ಟವು...

ಹೇಳ್ವರಿವರು ನಮ್ಮ ನಗರ ಪ್ರಗತಿ ಪಥದಿ ಸಾಗಿದೆ
ಆದರೇನು ಹೇಳು ಗೆಳೆಯ ನಿಸರ್ಗವೆಷ್ಟು ಸೊರಗಿದೆ...

ಬತ್ತಿಹೋದ ಅಂತರ್ಜಲವು ನಮ್ಮ ಪ್ರಗತಿಯ ಪ್ರತೀಕವು
ಇಂದು ಜನಕೆ ಆಗುತಿದೆ ಮಳೆಕೊಯ್ಲಿನ ಜ್ಞಾನೊದಯವು...

ಇದ್ದ ನೀರ ಹಾಳುಮಾಡಿ ಮಾಲಿನ್ಯವ ಹರಡಿದೆ
ಶುದ್ಧ ಜಲವ ಕುಡಿಯುವುದಕೆ ಹಣವನೀಡಬೇಕಿದೆ...

ನೋಡುಗೆಳೆಯ ನಮ್ಮ ನಗರ ಎಂಥಾ ಪ್ರಗತಿ ಹೊಂದಿದೆ
ದಿನ ದಿನವೂ ವಾಹನಗಳ ಸಾಲು ಸಾಲೇ ಬೆಳೆದಿದೆ...

ಅಂದು ಕಾಣುತಿದ್ದೆವಣ್ಣ ಶುದ್ದ ಮಳೆಯ ಧಾರೆಯ
ಇಂದು ನೋಡು ಮಳೆಯು ಪ್ರಗತಿ ಹೊಂದಿ, ಆಮ್ಲಮಳೆಯೇ ಸುರಿದಿದೆ...

ಅಂದು ನಮಗೆ ಸಿಕ್ಕುತಿತ್ತು ಶುದ್ಧ ಆಮ್ಲಜನಕವು
ಇಂದು ನಮಗೆ ಮುಂಜಾವದ ಶುದ್ಧ ಗಾಳಿಯೂ ದೊರಕದು...

ನೋಡಿರಣ್ಣ ನೋಡಿರೆಲ್ಲ ನಮದು ಎಂಥಾ ಪ್ರಗತಿಯು
ಪ್ರಗಥಿಜೊತೆಗೆ ಕಾಣುತೇವೆ ಅವನತಿಯ ಮಾರ್ಗವು...

ಶ್ರಮಜೀವಿ


ಇವನ ನೋಡು ಶ್ರಮಜೀವಿ ಬೆವರ ಸುರಿಸಿ ದುಡಿವನು
ಬಿಸಿಲು ಮಳೆಯ ಲೆಕ್ಕಿಸದೇ ಒಂದೇಸಮನೆ ದುಡಿವನು...

ಹೊರಟನೋಡು ಗಾಡಿಹಿಡಿದು ಪುಡಿಗಾಸಿನ ದುಡಿಮೆಗೆ
ಇಂದಿನ ದಿನ ಹೇಗೋ ಏನೋ ?? ದುಗುಡವಿದೆ ಮನಸಿಗೆ...

ದಿನಕೆ ಒಂದೇ ಕೆಲಸವೆಂಬ ತಡೆಯು ಇಲ್ಲ ಇವನಿಗೆ
ದಿನಪೂರ್ತಿ ದುಡಿದರೊ ಸಾಲದಾಯ್ತು ಬದುಕಿಗೆ...

ಇರುವುದೊಂದೇ ಪುಟ್ಟ ಸೂರು ಜೀವನಕೆ ಆಧಾರ
ಮಳೆಗೆ, ಚಳಿಗೆ ಬಿರುಬೇಸಿಗೆಗೆ ಮುರುಕು ಮಾಡೇ ಚಪ್ಪರ...

ಹರುಷವಿರಲಿ ದುಃಖವಿರಲಿ ಈತ ದುಡಿಯಬೇಕಿದೆ
ಇವನ ಮಡದಿ ಮಕ್ಕಳನ್ನು ಇವನು ಸಾಕಬೇಕಿದೆ...

ಇರುವುದೊಂದೇ ಇವನ ಪಾಲು ನೆಮ್ಮದಿಯ ಜೀವನ
ಸಿರಿವಂತರ ಚಿಂತೆಯಿಂದ ಮುಕ್ತ, ಬದುಕು ಪಾವನ...

ಸಹನೆಬೇಕು ಬಾಳಿನೊಳಗೆ...




ಮೊಗ್ಗು ಬಿರಿದು ಹೂವಾಗುವುದಕೆ
ಹೂವು ಅರಳಿ ಕಾಯಾಗುವುದಕೆ
ಕಾಯಿ ಮಾಗಿ ಹಣ್ಣಾಗುವುದಕೆ
ಸಹನೆಬೇಕು ಬಾಳಿನೊಳಗೆ...

ಪುಟ್ಟ ಕಂದ ಬರಲು ಜಗಕೆ
ಮಧುರ ನಗೆಯ ಬೀರುವುದಕೆ
ತೊದಲುನುಡಿಯ ನುಡಿಯುವುದಕೆ
ಸಹನೆಬೇಕು ಬಾಳಿನೊಳಗೆ...

ಶ್ರಮವಪಟ್ಟು ಓದುವುದಕೆ
ಹೆಚ್ಚು ಅಂಕ ಪಡೆಯುವುದಕೆ
ಓಳ್ಳೆಹೆಸರ ಪಡೆಯುವುದಕೆ
ಸಹನೆಬೇಕು ಬಾಳಿನೊಳಗೆ...

ಒಲುಮೆಯನ್ನು ಹುಡುಕುವುದಕೆ
ಮಧುರ ಪ್ರೀತಿ ಪಡೆಯುವುದಕೆ
ಮನದಿ ಆನಂದ ಹೊಮ್ಮುವುದಕೆ
ಸಹನೆಬೇಕು ಬಾಳಿನೊಳಗೆ...

ಪಕ್ಷಿಗೊಡ ಕಟ್ಟುವುದಕೆ
ಹೆಕ್ಕಿ ಕಡ್ಡಿ ತರಲು ಅದಕೆ
ಹೆಣ್ಣ ಪ್ರೀತಿ ಪಡೆಯುವುದಕೆ
ಸಹನೆಬೇಕು ಬಾಳಿನೊಳಗೆ...

ಬೀಜ ಗಿಡವಾಗುವುದಕೆ
ಗಿಡವು ಮರವಾಗುವುದಕೆ
ತಂಪನೆರಳ ನೀಡಲದಕೆ
ಸಹನೆಬೇಕು ಬಾಳಿನೊಳಗೆ...

ಚದುರಂಗವ ಆಡುವುದಕೆ
ದಾಳಗಳನು ನಡೆಸುವುದಕೆ
ವಿಜಯವನ್ನು ಸಾಧಿಸುವುದಕೆ
ಸಹನೆಬೇಕು ಬಾಳಿನೊಳಗೆ...

ಜೀವನವ ನಡೆಸುವುದಕೆ
ಬಾಳಿನೊಲುಮೆ ಕಾಣುವುದಕೆ
ಸಾರ್ಥಕ ಜೀವನ ಕಾಣುವುದಕೆ
ಸಹನೆಬೇಕು ಬಾಳಿನೊಳಗೆ...

ಕಾಲಚಕ್ರ


ಬೆಳಗಾಯಿತು ಎಂದಿನಂತೆ ಏಳಲೇನು ಬೇಸರ
ರವಿತೇಜನ ಕಿರಣಗಳ ಚೆಲ್ಲಿದೆ ನೇಸರ...

ತಡವಾಗೆದ್ದು ತಿಂಡಿತಿಂದು ಕಾರ್ಯಾಲಯಕೆ ಓಡುವೆ
ಸಿಗದೆ ಬಸ್ಸು ಸ್ವಲ್ಪತಡದಿ ಕಾರ್ಯಾಲಯವ ಸೇರುವೆ...

ಕಾರ್ಯಾಲಯದ ಕಾರ್ಯಗಳಲಿ ಮಗ್ನನಾಗಿ ಹೊಗುವೆ
ಮಧ್ಯಾನದಿ ಗಡಿಬಿಡಿಯಲಿ ಭೊಜನವಾ ಮಾಡಿವೆ...

ಸಂಜೆಯಾಯಿತೆಂದರೆ ನೋಡು ಕಾಫಿಯ ಗುಟುಕು ಬೇಕಿದೆ
ಸಮಯವಾಯ್ತು ಸಾಕು ಸಾಕು ಮನೆಯು ಕೊಗಿಕರೆದಿದೆ...

ಕೆಲಸದ ಒತ್ತಡದಿ ನೀನು ಮನೆಯ ಹಾದಿ ತುಳಿದಿಹೆ
ದಾರಿಯಲ್ಲಿ ಅಡ್ಡಬಂದನೊಬ್ಬ ದಾರಿ ಹೋಕನು...

ಆಫೀಸಿನ ಒತ್ತಡದಿ ಅವಗೆ ಪೂಜೆ ಮಾಡುವೆ
ಏನಹೇಳಲೆನು ನಿನಗೆ ಮನದಿ ಎಂಥಾ ದುಗುಡವು...

ಸಮಯವೆಲ್ಲಿ ಮಿತ್ರರಲ್ಲಿ ಕೊಡಿ ಮಾತನಾಡಲು
ಮನೆಗೆಹೋಗಿ ದಣಿವನೀಗಿ ಮಧುರಗೀತೆ ಕೇಳಲು...

ರಾತ್ರಿಯಾಯ್ತು ದಿನವೊ ಹೋಯ್ತು ಕಾಲಚೆಕ್ರ ಸಾಗಿದೆ
ಸಾಕು ಸಾಕು ದಿನದ ದುಡಿಮೆ ಇನ್ನು ಮಲಗಬೇಕಿದೆ...

ಇದೇ ನೋಡು ಜೀವನ ಗೆಳೆಯ ಕಾಲಚೆಕ್ರ ಸಾಗಿದೆ
ನಿನಗಾಗಿ ನನಗಾಗಿ ಯಾರಿಗಾಗೂ ಕಾಯದೆ....

Sunday, April 15, 2007

ಬಾಲ್ಯದ ನೆನಪು



ಮರುಕಳಿಸುತಿಹುದಿಂದು ಬಾಲ್ಯದಾ ನೆನಪು
ಕಳೆದು ಹೊದೀತೇನೊ ಅದರ ಹೊಳಪು...

ಬಾಲ್ಯದಲಿ ಆಡಿದ ಆ ಮಣ್ಣಿನಾಟ
ಎಲ್ಲರೊಡಗೊಡಿದ ಗೆಳೆಯರ ಒಡನಾಟ...

ಕಟ್ಟುತಿದ್ದೆವಂದು ಮರಳಿನ ಕಪ್ಪೆಗೊಡೊಂದ
ನಿನಕಿಂತ ನನಗೊಡು ದೊಡ್ಡದು ನೋಡು, ಎಂತಹಾ ಅಂದ...

ಅಂದು ನಾ ವಾಡಿದ ಮರಕೋತಿ ಆಟ
ಮರದಿಂದ ಕೆಳಬಿದ್ದು ಕಲಿತಂತಾ ಪಾಟ...

ಎಲ್ಲರಿಂದ ನನ್ನನಾ ಬಚ್ಚಿಟ್ಟು ಕಣ್ಣಾ ಮುಚ್ಚಾಲೆಯಲಿ
ಗೆಳೆಯನ ಕಣ್ತಪ್ಪಿಸಿ ಮುಟ್ಟಿದೆ ಗುರಿ ಸಂತಸದಲಿ...

ನಾವಾಡುತಿದ್ದ ಆ ಗಿಲ್ಲಿದಾಂಡು
ಅದಕೆಂದು ಸೇರುತಿದ್ದ ಹುಡುಗರ ದಂಡು...

ಅಪ್ಪನೊಡಗೊಡಿ ನಾ ಕಂಡ ಸಿನಿಮ
ಮನೆಪಾಟ ಮಾಡಿಲ್ಲ !!!! ಬೈದಿದ್ದಳಮ್ಮ...

ಅಂದು ದೀಪಾವಳಿಯಂದು ಕೈ ಸುಟ್ಟ ಹಣತೆ
ಅದಹೇಳಿ ಅಮ್ಮನಲಿ ಪಡೆದಂತ ಮಮತೆ...

ತಪ್ಪು ಲೆಕ್ಕವಮಾಡಿ ತಿಂದತ ಪೆಟ್ಟು
ಒಳ್ಳೆ ಹಾಡನು ಹಾಡಿ ಪಡೆದಂತಾ ಗಿಫ್ಟು...

ಓ ನನ್ನ ಬಾಲ್ಯವೇ ಮತ್ತೆ ಬರಲಾರೆಯಾ
ಆ ಮಧುರ ಸವಿಯಾದ ದಿನಗಳನು ತಾರೆಯಾ...

Saturday, April 14, 2007

ಪುಟ್ಟ ಮಲ್ಲಿಗೆ- ನನ್ನ ಸ್ನೇಹಿತರ ಮಗು ಅನುಶ್ರೀಗಾಗಿ



ಪುಟ್ಟಮಲ್ಲಿಗೆ ನೀನು ನಗುತಿರಲು ಚೆಂದ
ಪೂರ್ಣಚೆಂದಿರನಂತೆ ನಿನ ಮೊಗವೇ ಅಂದ...

ನಿತ್ಯಮಲ್ಲಿಗೆ ನೀನು ನಿನ ನಡೆಯೇ ಚೆಂದ
ಆ ಪುಟ್ಟ ಹೆಜ್ಜೆಗಳ ನೋಡಲೇ ಅಂದ...

ದುಂಡು ಮಲ್ಲಿಗೆ ನೀನು ನಿನ ಮಾತು ಚೆಂದ
ತೊದಲು ನುಡಿಗಳ ನಿನಪದಗುಚ್ಚ ಚೆಂದ...

ಮುತ್ತುಮಲ್ಲಿಗೆ ನೀನು ನಿನ ತುಟಿಯೇ ಚೆಂದ
ಸವಿಮುತ್ತು ನೀಡಿರೆ ನೀ ಒಲವಿನಿಂದ...

ಸೊಜಿಮಲ್ಲಿಗೆನೀನು ಸೊಜಿಕಲ್ಲಿನ ಸೆಳೆತ
ಎಲ್ಲರಲಿ ಬೆರೆಯುವ ನಿನಮಾತ ಎಳೆತ...

ಸಂಜೆಮಲ್ಲಿಗೆ ನೀನು ಸಂತಸದಿ ಬಾಳಿರು
ನಿನ್ನಹೆಡೆದ ಮಾತೆಯ ಕೀರ್ತಿಯನು ಮೊಳಗಿರು...

ಮೈಸೊರಮಲ್ಲಿಗೆ ನೀನು ಮನೆಮನದಿ ತುಂಬಿರು
ನಲಿನಲಿದು ಕುಣಿದಾಡಿ ಸಂತಸದಿ ಬಾಳಿರು...

Friday, April 13, 2007

ಮಳೆಯೇ ನಿನ್ನ ಮಾಯವಿದೇನೇ...



ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...

ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...

ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...

ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...

ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...

ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...

ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...

ಮಳೆಯೇ ನಿನ್ನ ಮಾಯವಿದೇನೇ...

ಆರ್ಕುಟ್ ಎಂಬ ಮಹಾನ್ ಮಿತ್ರ



ಪ್ರತಿದಿನವೂ ನಿನ್ನ ಮೊಗವ ನಾ ಕಂಡು ನಲಿಯಲು
ಬೆಳೆಯುತಿದೆ ನನ್ನ ಸ್ನೇಹಿತರ ಸಾಲು ಸಾಲು

ನೀನಿದ್ದರೇ ಚೆಂದ ಮನಕೆ ಆನಂದ
ಎಲ್ಲಿಂದಲೋ ಬಂದ ಸ್ನೆಹಿತರ ತಂದ

ನಿನ್ನೊಳಗೆ ನಾ ಹೊಕ್ಕು ಕಂಡಿಹೆನು ಸ್ನೇಹವಾ
ನೀನಿಲ್ಲದ ಜೀವನ ಕಲ್ಪಿಸಲು ಸಾಧ್ಯವಾ

ಸ್ನೇಹವೆಂದರೆ ದೊಡ್ಡದು ಪ್ರೀತಿ ಮಾತಲ್ಲ
ಮನದಿ ಪ್ರೀತಿ ಮೂಡಿರಲು ಅಶ್ಚರ್ಯವೇನಿಲ್ಲ

ಪ್ರೀತಿಯೆಂದರೆ ಬರೀ ಪ್ರೇಮ, ಕಾಮವಲ್ಲ
ಮದುರಭಾವನೆಯಿರಲು ವಿವರಣೆ ಬೇಕಿಲ್ಲ

ಮಿಡಿದ ಹೃದಯಗಳಿಗೆ ಬೆಸುಗೆಯಾಗಿ
ಕಳೆದ ಗೆಳೆತನವ ಮರಳಿ ಪಡೆದಿರಲು ಬೀಗಿ

ಬಂದರೆಷ್ಟುಜನ ನಿನ್ನ ಪ್ರತಿಸ್ಪರ್ಧಿಯಾಗಿ
ಹಾಗೆಯೇ ಮರೆಯಾದರು ಹೆಸರಿಲ್ಲದಾಗಿ

ನಿನ್ನಿಂದ ನಾಕಂಡೆ ನನ್ನ ಗೆಳೆಯರನ್ನ
ಮರೆಯುವುದು ಹೇಗೆ ನೀ ನನ್ನ ಚಿನ್ನ

ಈ ನನ್ನ ಕವಿತೆಗೆ ನೀ ಸ್ಪೂರ್ತಿಯಾದೆ
ನನ್ನ ಬಾಳ ಬೆಳಕಿಗೆ ನೀ ಹಣತೆಯಾದೆ

ಹಚ್ಚಿರೆಲ್ಲರು ಬಂದು ಸ್ನೇಹದಾ ದೀಪವ
ಬಾಳಲ್ಲಿ ಹೊಂದೋಣ ಶಾಂತಿಯಾ ರೂಪವ

ಹಚ್ಚೋಣ ಎಲ್ಲೆಡೆ ಕನ್ನಡದಾ ದೀಪ
ತೋರೋಣ ಜಗಕೆ ಕರುನಾಡ ರೊಪ

ಬದುಕು...


ಹುಟ್ಟುವುದೆಲ್ಲೋ ಬೆಳೆಯುವುದೆಲ್ಲೋ...
ಬಾಳನೌಕೆಯನೇರಿ ಸೇರುವ ದಡವೆಲ್ಲೋ...

ಬದುಕಿನ ಪಯಣದ ದಾರಿ ಕಂಡಿಲ್ಲ ನಾವು...
ಬಾಳನೌಕೆಯನೇರಿ ಹೊರಟವರು ನಾವು...

ಜೀವನದ ರಸಘಳಿಗೆ ಸವಿದವರು ನಾವು...
ಬದುಕಿನ ಬೇಸರದ ಕಹಿಉಂಡವರು ನಾವು...

ಗೆಳೆಯರೊಡಗೂಡಿ ಕಳೆದ ಆ ಕ್ಷಣ...
ಮರಳಿ ಬರುವುದೇ ?? ಏಕಮುಖ ಪಯಣ...

ಒಮ್ಮೆ ಸಿಕ್ಕವರು ಮತ್ತೆ ಸಿಕ್ಕುವುದು ವಿರಳ...
ಜೊತೆಗೊಡಿ ನಡೆದಿರೆ ಬದುಕುವುದು ಸರಳ...

ಅಮ್ಮನ ನೆನಪು ಕಾಡುತ್ತಿದೆ...


ಎಂಥಾ ಚೆಂದ ನನ್ನ ಅಮ್ಮ
ನೀವು ಇವಳ ಬಲ್ಲಿರೆ...
ಇವಳ ಮಾತು ಇವಳ ಮಮತೆ
ಮಧುರ ನೆನಪ ಚೆಲ್ಲಿರೆ...

ನಾನಿಹೆನು ಬಲುದೂರ
ಮರಳಿಬರಲು ಕಾತರ...
ಅಮ್ಮ ನಿನಗೆ ಹೇಳಲೇನು
ಮನದಲೆಷ್ಟು ಬೇಸರ...

ಅಮ್ಮ ನಿನ್ನ ಮಾತೇ ಮುತ್ತು
ನನ್ನ ಮನದ ತುಂಬೆಲ್ಲಾ...
ಕಾಡಿದೆ ನಿನ್ನ ಕೈತುತ್ತು
ನೀ ತುಂಬಿರುವೆ ಮನದಲೆಲ್ಲಾ...

ಅಮ್ಮ ನಿನ್ನ ನೆನಪು ನನ್ನ
ಪದೇ ಪದೇ ಕಾಡಿದೆ...
ಕಣ್ಣಂಚಿನಲಿ ಜಿನುಗುತಿದೆ
ನೆನಪ ಬಿಂದು ನಿನ್ನದೇ...

ನಿಸರ್ಗ...



ಎಂಥಹಾ ಮೋಹಕವೀ ನಿಸರ್ಗದ ತಾಣ
ವರ್ಣಿಸಲು ಪದಗಳಿಲ್ಲ ಇದರ ಬಿನ್ನಾಣ

ಅಂದು ಕಾಣುತ್ತಿತ್ತು ಹಚ್ಚಹಸುರಿನ ಕಡಲು
ಇಂದು ಬರಿದಾಗಿದೆ ಈ ಮಾತೆಯ ಒಡಲು

ಎಲ್ಲಿ ನೋಡಿದರಲ್ಲಿ ಕಾಣುವ ಕಾರ್ಮೋಡ,
ನಮ್ಮ ವಾಹನವು ಬಿಟ್ಟ ಹೊಗೆಯಹುದು ನೋಡ

ದೃಷ್ಟಿಹರಿಸಿದಷ್ಟೂ ಕಟ್ಟಡಗಳ ಸಾಲು
ಮರಳಿಬರುವುದೇ ಹಸಿರು ಮರಗಳ ನೆರಳು

ಅಂದು ಕೇಳುತ್ತಿತ್ತು ಕೋಗಿಲೆಯ ಗಾನ
ಇಂದು ಕೇಳಿಬರುವುದು ಕರ್ಕಶದ ಗಾನ

ಓ ನನ್ನ ಮಾತೆಯೇ ಕೊಡು ಎನಗೆ ಶಕ್ತಿಯ
ಮರಳಿ ತರಬಹುದೇ ಆ ನಿನ್ನ ಪ್ರಕೃತಿಯ ????

ಬೆಳದಿಂಗಳ ಬಾಲೆ...




ಆಹಾ!!! ಎಂಥಹಾ ಹಿತವಾದ ಮೃದು ಕೂಮಲ ಧ್ವನಿ
ಇದು ಕೋಗಿಲೆಯಲ್ಲ ನನ್ನ ಕಲ್ಪನೆಯ ಬೆಡಗಿಯ ದನಿ

ನೋಡಲಿವಳು ಹೇಗಿರಬಹುದೆಂದು ಕೇಳುತಿದೆ ಮನವು
ಅವಸರವೇತಕೆ ಮನವೇ ಅಂತರವಿದೆ ನಮ್ಮ ನಡುವು

ಆ ನಿನ್ನ ಹಿತವಾದ ಮಾತುಗಳ ತರಂಗ
ನೋಡಲೇ ಬೇಕು ನಿನ್ನ ಎನುತಿದೆ ನನ್ನ ಅಂತರಂಗ

ಆ ನಿನ್ನ ಕೈ ಬಳೆಯ ಸಂಗೀತದ ಲಯ
ಮೊಕನಾಗಿಹೆ ನಾನಿಂದು ಸ್ಮರಿಸಿ ನಿನ್ನ ವಿಸ್ಮಯ

ಹಾತೊರೆದಿದೆ ಎನ್ನ ಮನ ನಿನ್ನ ಒಮ್ಮೆ ಕಾಣಲಿಕ್ಕಾಗಿ
ಕಾದಿಹುದು ಈ ಮನ ನಿನ್ನ ಬರುವಿಕೆಗಾಗಿ..

ಚಾರಣದ ಹಾದಿಯಲ್ಲಿ...



ಚಾರಣದ ಹಾದಿಯಲ್ಲಿ...

ನೋಡುಬಾ ಗೆಳೆಯ
ನಿಸರ್ಗದ ಸೌಂದರ್ಯವ
ಬಣ್ಣಿಸಲು ಅಸಾಧ್ಯ
ಇದರ ಆಂತರ್ಯವ

ಬದುಕೆಂಬ ಪಯಣದಿ
ಚಾರಣಿಗನು ನೀನು..
ಮುನ್ನುಗ್ಗಿ ಬಾ ಗೆಳೆಯ
ಕೂಗಿ ಹೇಳಿದೆ ಮೇಲಿರುವ ಬಾನು...

ಮುನ್ನುಗ್ಗಿ ಬಾ ಗೆಳೆಯ
ಜೀವನದ ಕಾನನವ ದಾಟಿ
ನಿನ್ನ ಮುಂದೆ ಸಿಗುವ
ಕಷ್ಟ ಕಾರ್ಪಣ್ಯವ ಮೀಟಿ

ಸಿಗುವುದು ನಿನಗೆ
ಕಠಿಣವಾದ ಕಂದರಗಳು...
ಮುನ್ನುಗ್ಗು ಗೆಳೆಯ
ಬಹಳ ಸುಂದರವೀ ಕಂದರವು...

ಸಿಗುವುದು ನಿನಗೆ
ತಂಪಾದ ನೆರಳು...
ಅಲ್ಲೆ ನಿಲ್ಲಬೇಡ
ಗೆಳೆಯ ಗುರಿಮುಟ್ಟುವವರೆಗು

ಸಮಯವಿಲ್ಲ ನಿನಗೆ
ಗುರಿ ಮುಟ್ಟುವವರೆಗೆ
ಕೂಗಿ ಕರೆದಿದೆ ಮೇಲೆ
ಸಂತೃಪ್ತಿಯ ಸಂತೋಷದ ಬುಗ್ಗೆ...

ಗುರಿಮುಟ್ಟಿದ ಸಂತಸ
ಎಂಥಹಾ ಮಧುರ
ಮರೆವೆನೀ ನಿನ್ನ ಕಷ್ಟಗಳ
ಜೀವನವಿದು ಬಲು ಸುಂದರ...

Thursday, April 12, 2007

ನನ್ನ ಕಂದಮ್ಮ... (ಸ್ಪೂರ್ತಿ)


ಪುಟ್ಟ ಕೈಗಳುನಿನದು
ಎಂಥಹಾ ಸ್ಪರ್ಶ...
ನಿನ್ನ ಕೋಮಲ ಮನದಲ್ಲಿ
ನೆಲೆಸಲಿ ಹರ್ಶ...

ಅಂಬೆಗಾಲಿಡಲು ನೀನು
ಎಂಥಹಾ ಸಂತಸ...
ವರ್ಣಿಸಲು ಮಾತಿಲ್ಲ
ಆ ನಿನ್ನ ಸೊಗಸ...

ಮುದ್ದು ಕಂದಮ್ಮ ನೀನು
ನಿನ್ನ ನಗೆಯೇ ಚೆಂದ...
ಮನೆಯೆಲ್ಲಾ ತಿರುಗಿರಲು
ಮನಕೆ ಆನಂದ...

ಪುಟ್ಟ ಹೆಜ್ಜೆಗಳು ನಿನದು
ನಮ್ಮ ಮನೆಯಲೆಲ್ಲಾ
ನಿನ್ನ ಗೆಜ್ಜೆನಾದ
ಮನೆ ಮನದಲೆಲ್ಲಾ

ಹಾಲ್ಗೆನ್ನೆ ಕೂಸು
ಸವಿನುಡಿಯ ನುಡಿದಿರೆ...
ಹರುಷವೋ ಹರುಷ
ಹೆಡೆದಿರುವ ತಾಯಿಗೆ...

ಬೆಳಗು ಮನೆಮಲ್ಲಿಗೆಯೇ
ಸದಾ ಉಜ್ವಲವಾಗಿ...
ನೋರ್ಕಾಲ ಬಾಳು ನೀನು
ಹಾರೈಸುವೆ ನಾ ನಿನಗಾಗಿ...

ಭಾವನೆಗಳ ಸಾಗರದಲ್ಲಿ....




ಭಾವನೆಗಳ ಸಾಗರದಲ್ಲಿ
ಪ್ರೀತಿಯ ಅಲೆಯಾಗಿಬಂದು
ಹೃದಯದ ದಡಕ್ಕೆ ಅಪ್ಪಳಿಸಿದವಳು
ನೀನಲ್ಲವೆ ???

ಬಿರುಬಿಸಿಲ ಬೇಗೆಯಲ್ಲಿ
ತಣ್ಣನೆಯ ಗಾಳಿಯಂತೆ
ಬಂದೆನ್ನ ಮುದಗೊಳಿಸಿ ನಕ್ಕವಳು
ನೀನಲ್ಲವೆ ???

ಬರಡು ಭೂಮಿಯಲ್ಲಿ
ಜೀವ ಸೆಲೆಯಾಗಿ ಬಂದು
ನದಿಯಾಗಿ ಹರಿದವಳು
ನೀನಲ್ಲವೆ ???

ಮೈನಡುಗುವ ಚಳಿಯಲಿ
ಬೆಚ್ಚನೆಯ ಸವಿನೆನಪತಂದು
ಮೈಪುಳಕಗೊಳಿಸಿದವಳು
ನೀನಲ್ಲವೆ ???

ಸಂಜೆಯ ಮಬ್ಬುಗತ್ತಲಿನಲ್ಲಿ
ಒಲವಿನ ಬೆಳಕಚೆಲ್ಲಿ
ಬಳಿಬಂದು ನಿಂತವಳು
ನೀನಲ್ಲವೆ ???

ಕೂಗಿ ಹೇಳಿದೆ ನನ್ನ ಹೃದಯವಿಂದು..
ಒಮ್ಮೆಯಾದರೂ ನೀನು ಬಳಿಬರುವೆಯೆಂದು..