ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Saturday, April 21, 2007

ಜೋಡಿ ಹಕ್ಕಿಗಳು...


ನನ್ನ ಎಲ್ಲಾ ಓದುಗರಿಗೆ ಮತ್ತೆ ನನ್ನ ಆತ್ಮೀಯ ಗೆಳೆಯರಿಗೆ ನನ್ನ ಹೃದಯ ಪೂರ್ವಕ ನಮನ... ನಾನು ಈ ಕವನ ಬರಿಯೊದಕ್ಕೆ ಅಂತರ್ಜಾಲದಲ್ಲಿ ಬಂದಿದ್ದ ಒಂದು ಪುಟ್ಟ ಜೋಡಿ ಹಕ್ಕಿಗಳ ಕಥೆ ಮತ್ತೆ ನನ್ನ ಕಣ್ಮುಂದೆ ನಡೆದ ನಿದರ್ಶನಕೂಡಾ... ಇದು ಹೈದರಾಬಾದಿನಲ್ಲಿ ನಡೆದಿದ್ದು. ನೋಡಿ ನಿಮ್ಮ ಅಭಿಪ್ರಾಯವನ್ನ ತಿಳಿಸಿ-ನಿಮ್ಮ ಸ್ನೇಹಿತ.


ಪುಟ್ಟ ಹಕ್ಕಿಗಳ ಜೋಡಿ ಮೇಲೆ ಹಾರಿತ್ತು
ಸಂತಸದಿ ಆಗಸದ ತುಂಬಾ ತೇಲಿತ್ತು...

ಜಗದಲಿರುವ ದುಃಖ ದುಮ್ಮಾನಗಳ
ಮುಂದೆ ಬಂದೊದಗುವ ಕಷ್ಟ ಕಾರ್ಪಣ್ಯಗಳ...

ಏನನ್ನೂ ಲೆಕ್ಕಿಸದೆ ನೀಲಾಕಾಶದಿ ವಿಹರಿಸಿತ್ತು
ಪುಟ್ಟ ಹಕ್ಕಿಗಳ ಜೋಡಿ ಗಾಳಿಯಲಿ ತೇಲಿತ್ತು...

ಬಂದೊದಗಿದ ಅಡ್ಡಗಳದಾಂಟಿ ಸಾಗಿತ್ತು
ವೇಗದ ಗಾಳಿಯ ಮೀಟಿ ಹಾರಿತ್ತು...

ತಮ್ಮ ಗೂಡಿನ ಆಸೆಯ ಮನದಲಿರಿಸಿ
ಹೊರ್‍ಅಟಿದ್ದವೀಜೋಡಿ ನಲೆಯನರಸಿ...

ನೆಲೆಯ ಹುಡುಕುತ ಹೊರಟ ಜೋಡಿಗಳಿಗೆ
ಕಾದಿತ್ತು ಒಂದು ಕೆಟ್ಟ ಗಳಿಗೆ...

ನಗರದ ವಾತಾವರಣದಿ ಹಾರುತಾ ಹೆಣ್ಣು
ಬಿದ್ದಿತ್ತು ಅದರಮೇಲೆ ಸಾವಿನ ಕಣ್ಣು...

ವಿಧಿಯ ಆಟದಿ ಹೆಣ್ಣು ಕೆಳಗೆ ಬಿದ್ದಿತು
ಅದ ನೋಡಿದ ಗಂಡು ವಿರಹದಿಂದ ಗೋಳಾಡಿತ್ತು...

ಹಕ್ಕಿಯದು ಬಿದ್ದಿತ್ತು ನಡುದಾರಿಯಲ್ಲಿ
ಅದರ ಮಿತ್ರನ ಕೂಗು ಕೇಳುವರಿಲ್ಲ ಇಲ್ಲಿ...

ವಿರಹದ ಬೇಗೆಯಲಿ ಬೆಂದು ಕೂಗಿತ್ತಾ ಗಂಡು
ಆಹಾರ ಸೇವಿಸದೇ ಗೆಳತಿಗಾದ ವ್ಯಥೆಯಕಂಡು...

ತ್ಯಜಿಸಿತ್ತು ಪ್ರಾಣ, ಮಾಡಿತ್ತು ಪಯಣ
ತನ್ನ ಗೆಳತಿಯ ಕಡೆಗೆ, ಮುಚ್ಚಿಕೊಂಡಿತ್ತು ಅದರ ನಯನ...

ಇದುವೇ ನೋಡಿ ಗೆಳೆಯರೇ ನಿಜವಾದ ಪ್ರೇಮ
ಬದುಕಿರುವ ಜೀವಿಗಳು ಸಾಯಲೇಬೇಕು, ಇದು ನಿಸರ್ಗದ ನಿಯಮ...

10 comments:

bhadra said...

ಕರುಳು ಕಲಕುವ ದೃಶ್ಯವನ್ನು ಯಥಾವತ್ತಾಗಿ ಪದಗಳ ಮೂಲಕ ಚಿತ್ರಿಸಿದ್ದೀರಿ. ವಾಲ್ಮೀಕಿ ಋಷಿಯು ಕ್ರೌಂಚ ಪಕ್ಷಿಗಳ ಅಗಲಿಕೆಯನ್ನು ನೋಡಿ ರಾಮಾಯಣ ಕಾವ್ಯವನ್ನು ಸೃಷ್ಟಿಸಿದರಂತೆ - ನಿಮ್ಮಿಂದ ಒಂದು ಪುಟ್ಟ ಕವನ ಬಂದಿದೆ - ಇದರ ಹಿಂದೆಯೇ ಮಹಾಕಾವ್ಯವನ್ನು ನಿರೀಕ್ಷಿಸುವೆ - ಹಾಂ ಹಾಂ ಹಾಂ ಅದರಲ್ಲಿ ಸಾರ ಇಲ್ಲಿರುವಷ್ಟೇ ಗಟ್ಟಿಯಾಗಿರಬೇಕು :)

Anonymous said...

maha kavana super idhe
oTnalli nin blog awesome heege munduvarsu olldaagli :)

Unknown said...

sakkat chamaka maga....

ಅಂತರ್ವಾಣಿ said...

hakkiya premavannu chennagi baredideeri..

Anonymous said...

prashant nimma kawana galu thumba chenagidevee

Narayan said...

ನಿಮ್ಮ ಕವನ ಚೆನ್ನಾಗಿದೆ.. ಹೀಗೆಯೇ ನಿಮ್ಮ ಪ್ರತಿಭೆಯೂ ರೆಕ್ಕೆ ಚಿಮ್ಮಿ ಎತ್ತರಕ್ಕೆ ಹಾರಲಿ...!

shankarmurthy said...

thUmba Channagedi, Innu thUmba kaVanagallanna barehiri.....................!

..... said...

Olle dukhantya iro kavana kottiddiya.....ondu Romantic padya barali kanamma...
"kannu kannu kalethaaga...manasu uyyale..." tharada moodalliddini..:)

Unknown said...

bahala tragedy agide

Samyama said...

Very nice.

mana muttuva kavana idu. nijavaada prema hegide annodanna nimma ee kavanadalli torisiddera. Olle kavna.