ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Monday, April 16, 2007

ಶ್ರಮಜೀವಿ


ಇವನ ನೋಡು ಶ್ರಮಜೀವಿ ಬೆವರ ಸುರಿಸಿ ದುಡಿವನು
ಬಿಸಿಲು ಮಳೆಯ ಲೆಕ್ಕಿಸದೇ ಒಂದೇಸಮನೆ ದುಡಿವನು...

ಹೊರಟನೋಡು ಗಾಡಿಹಿಡಿದು ಪುಡಿಗಾಸಿನ ದುಡಿಮೆಗೆ
ಇಂದಿನ ದಿನ ಹೇಗೋ ಏನೋ ?? ದುಗುಡವಿದೆ ಮನಸಿಗೆ...

ದಿನಕೆ ಒಂದೇ ಕೆಲಸವೆಂಬ ತಡೆಯು ಇಲ್ಲ ಇವನಿಗೆ
ದಿನಪೂರ್ತಿ ದುಡಿದರೊ ಸಾಲದಾಯ್ತು ಬದುಕಿಗೆ...

ಇರುವುದೊಂದೇ ಪುಟ್ಟ ಸೂರು ಜೀವನಕೆ ಆಧಾರ
ಮಳೆಗೆ, ಚಳಿಗೆ ಬಿರುಬೇಸಿಗೆಗೆ ಮುರುಕು ಮಾಡೇ ಚಪ್ಪರ...

ಹರುಷವಿರಲಿ ದುಃಖವಿರಲಿ ಈತ ದುಡಿಯಬೇಕಿದೆ
ಇವನ ಮಡದಿ ಮಕ್ಕಳನ್ನು ಇವನು ಸಾಕಬೇಕಿದೆ...

ಇರುವುದೊಂದೇ ಇವನ ಪಾಲು ನೆಮ್ಮದಿಯ ಜೀವನ
ಸಿರಿವಂತರ ಚಿಂತೆಯಿಂದ ಮುಕ್ತ, ಬದುಕು ಪಾವನ...

4 comments:

Narayan said...

ಪ್ರಶಾನ್ತ್ ಉತ್ತಪ್ಪನವರ ಈ ಕವನ ನಮ್ಮೆಲ್ಲರನ್ನು ಯೋಚಿಸುವಂತೆ ಮಾಡಿದೆ. ಜಾಗತೀಕರಣದ ಮುಖವಾಡದಲ್ಲಿ ಇಂಥವರಿಗೆ ಒಳ್ಳೆಯ ಜೀವನವನ್ನು ಕೊಡುತ್ತೇವೆಂದು ಹೇಳಿ ಯಾಮಾರಿಸುವ ಸರ್ಕಾರವೂ ಸಹ ಈ ಕವನವನ್ನು ಗಮನಿಸಲಿ.

Unknown said...

HMMM TUMBA CHENNAGIDE PACHU YESTU SUPERAGI VIVARANE MADIDHIYA...

Anonymous said...

shramajeeviya badukina vaastavikathe yannu bahaLa saraLa padagaLalli chitrisiddeera.. nimma ee kavana
"nEgila hiDidu holadoLu hADuta uLuvA yOgiya nODalli" haaDu nenapu maaDitu

ಅಂತರ್ವಾಣಿ said...

neevu obba cooli yavana bagge bardirodu nijakku chennagide..
kavigaLu, parisara, heNNu ityaadi vasthu gaLa baggene jaasthi barithaare.. aadare neevu intha kavana bardu, dinagooligaLa jeevana vannu ellarigu thorisideera..
dhanyavaada.