ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, November 21, 2007

ಅವಳಿಗಾಗಿ...

ಮನಸ್ಸಲ್ಲಿ ಮನಸನಿಟ್ಟು,
ನನ್ನೆದೆಯಲ್ಲಿ ಅಳಿಸಲಾಗದ ಹೆಜ್ಜೆಗುರುತನಿಟ್ಟು
ಎನ್ನೆದೆಯ ಬಡಿತದಲಿ ಅವಳ ಹೆಸರನಿಟ್ಟು
ಮುಗುಳುನಗೆ ನಕ್ಕು ಹೋದವಳು...

ಉರಿಬಿಸಿಲಲಿ ತಂಪನಿಟ್ಟು
ತುಂತುರುಮಳೆಯಲಿ ಪುಳಕವನಿಟ್ಟು
ಮೌನದಲ್ಲೇ ಮಾತನಾಡಿಸಿ ಸಂತಸವ ಕೊಟ್ಟು
ಮತ್ತೆ ಬರುವೆನೆಂದು ಹೇಳಿದವಳು...

ಬೆಳದಿಂಗಳ ರಾತ್ರಿಯಲಿ
ತಾರೆಗಳ ಸಂತೆಯಲಿ
ಚೆಂದಿರನ ನಾಚಿಸುತ್ತಾ
ಬೆಳಕಚೆಲ್ಲಿಬಂದವಳು...

ನೆತ್ತಿಸುಡುವ ಸೂರ್ಯಕಿರಣಗಳ ನಡುವೆ
ದಾಹತುಂಬಿದ ದಾರಿಯಲ್ಲಿ
ತಂಪು ನೆರಳಾಗಿ ಬಂದು
ಅಮೃತ ಸಿಂಚನವನ್ನೆರೆದವಳು...

ಹೊಂಗನಸಿನಲ್ಲಿ ಬಂದು
ಬೆಚ್ಚನೆಯ ಅಪ್ಪುಗೆಯ ಕೊಟ್ಟು
ಸಿಹಿ ಮುತ್ತನಿಟ್ಟವಳು
ನೀ ಹೋದದ್ದಾದರೂ ಎಲ್ಲಿಗೆ ???

ನಿನ್ನ ಅಪ್ಪುಗೆಗಾಗಿ ಕಾದಿರುವ ನನ್ನ ಬಾಹುಗಳು
ನಿನ್ನ ಕೂಗಿ ಕರೆದಿದೆ,
ಬಳಿ ಬಂದು ಒಮ್ಮೆ ಆ ಕಿರುನಗೆಯ ಬೀರು...
ನಿನ್ನ ಕಣ್ಣ ಅಂಚಿನಲಿ ಮಾತನಾಡು...

ನಿಶ್ಯಬ್ಧತುಂಬಿರುವ ಈ ಬಾಳಿನಲಿ
ಸವಿನುಡಿಗಳ ತೋರಣವ ಕಟ್ಟಿ
ಬಾಳಹಾದಿಯಲಿ ಜೊತೆಗೂಡಿ ಸಾಗಲು
ಕನಸಿನಿಂದ ನನಸಾಗಿ ಬಾ...

Monday, November 12, 2007

ನೀನು..

ಮುಸ್ಸಂಜೆಯ ಮಡಿಲಿನಲ್ಲಿ
ತಂಗಾಳಿಯ ತಂಪಿನಲ್ಲಿ
ತೇಲಿಬಂದಿತೊಂದು ಬೆಚ್ಚನೆಯ ಸ್ಪರ್ಶ,
ಅದುವೇ ನಿನ್ನಯ ಉಸಿರು...

ಕಗ್ಗತ್ತಲ ಇರುಳಿನಲ್ಲಿ
ತಾರೆಗಳ ತೋಟದಲ್ಲಿ
ಬೆಳಗುತಿದ್ದ ಚಂದಿರನಲ್ಲಿ ನಾ ಕಂಡೆ
ನಿನ್ನಯ ಸೌಂದರ್ಯದ ಬಿಂಬ...

ಪುಷ್ಪರಾಶಿಗಳ ಘಮ ಘಮಿಸುವ ಅಲೆಗಳ ನಡುವೆ
ವೈವಿಧ್ಯಮಯ ವಿಸ್ಮಯಗಳ ನಡುವೆ
ಉಲ್ಲಾಸಭರಿತ ಗಾಳಿಯೊಂದು ಬೀರಿ ಬಂದಿತು
ಅವುಗಳಿಗೂ ಮೀರಿದ ನಿನ್ನಯ ಮೈ ಕಂಪು...

Monday, November 5, 2007

ऎ दिल्...

ऎ दिल् तु सम्भल् जा

तु है नादान् जॊ बुराई और् अच्हायी नही जान्ता है,
जॊ कॊइ भी हस्तॆ हुयॆ कुच्ह् बॊलॆ तु उस्कॆ सारॆ बात् मान् जाता है,

कहिन् ऐसा ना हॊ जायॆ कि जिसॆ तु अप्नॆ अन्दर् रख्कॆ इत्ना प्यार् कर्ता है,
वॊ तुझ्कॊ तॊड्कॆ तॆरॆ आन्गन् मै आन्सु चॊड् जायॆ.

ऎ दिल् तु सम्भल् जा

पाना है तुझॆ वॊह् प्यार् जॊ अटूट् हॊ,
जिस्मॆ ममता और् ढॆर् सारा ख्याल् हॊ,

जॊ तुझ्कॊ चाहॆ एक् प्यारी मासूम् बच्चे कि तरह्,
जॊ तुझ्कॊ पालॆ कभी ना मुर्झॆ हुयॆ फूल् कि तरह्...

तुझ्मॆ है ताकत् जॊ सह् सकॆ हर् गम्,
तु अगर् चाहॆ तॊ तु खुश् रहॆगा हर्दम्...

ऎ दिल् तु सम्भल् जा, ऎ दिल् तु सम्भल् जा, कहिन् देर् न हॊ जायॆ...

Saturday, November 3, 2007

ಯಾರು ???

ಮನದಿ ಹುದುಗಿರುವ ವಿಚಾರಗಳು ಹಲವು,
ತನ್ನದೇ ಆದ ಆಲೋಚನೆಗಳು ಹಲವು,
ಮನದಿ ಮೂಡಿರುವ ಭಾವನೆಗಳ ಕದನದಿ
ಗೆದ್ದವರು ಯಾರು ಸೋತವರು ಯಾರು...

ಸುಪ್ತ ಮನಸಿನ ವೇಗವನು ಹಿಡಿಯುವರು ಯಾರು,
ಸುಪ್ತ ಮನಸಿನ ಕನಸನು ಕಂಡವರು ಯಾರು..
ಎಲ್ಲ ಪರಿಧಿಗಳನು ಮೀರಿ ಈ ಮನವು ಜಿಗಿದ
ಜಿಗಿತವನು ಅಳತೆಗೋಲಿಟ್ಟು ಅಳೆದವರು ಯಾರು...

ನೆನ್ನೆ ನಾಳೆಗಳ ನಡುವೆ ಬಂದು ಹೋಗುವ ದಿನಗಳನು
ಸಂತಸದಿ ಕಳೆದೆನೆಂದು ಹೇಳುವವರು ಯಾರು..
ಪ್ರಕೃತಿಯ ಮಡಿಲಿನ ಈ ಪುಟ್ಟ ಜೀವದೊಳಗಿನ
ಪುಟ್ಟ ಮನಸಿನ ಮಾತನು ಕೆಳುವವರು ಯಾರು..

ಹೃದಯದ ಮಾತ ಬುದ್ದಿ ಕೇಳುವುದಿಲ್ಲ,
ಬುದ್ದಿಯ ಮಾತ ಹೃದಯ ಕೇಳುವುದಿಲ್ಲ
ಈ ಇಬ್ಬರನಡುವೆ ಪ್ರೀತಿ ಮೂಡಿಸುವವರು ಯಾರು...

ಇಂದಲ್ಲ ನಾಳೆ ಮಣ್ಣಲ್ಲಿ ಮಣ್ಣಾಗುವ ಈ ಶರೀರವನ್ನು
ಬಿಟ್ಟು ಹೊರಡುವ ಮನಸ್ಸಿಗೆ ಬುದ್ದಿ ಹೆಳುವವರು ಯಾರು...
ಪ್ರತಿ ದಿನದ ಬದುಕಿನಿಂದ ದುರಾಸೆಗೊಳಗಾಗಿ
ದಾರಿತಪ್ಪುವ ಮನಕೆ ಸರಿದಾರಿ ತೋರುವವರು ಯಾರು...