ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, April 19, 2007

ಮೌನ



ಎನ್ನೊಡನೆ ಮಾತಾಡು ಬಿಮ್ಮೆನುತಿಹುದೀ ಮನ
ನಿನ್ನ ಮಾತಿಲ್ಲದೆ ಬೇಸರದಿ ಕೂಡಿದೆ ಈ ದಿನ...

ನೀ ಮಾತಾಡುತಿರೆ ಮುತ್ತುಗಳ ಸಾಲು ಧರೆಗಿಳಿದಂತೆ
ನೀ ಮೌನವಾಗಿರೆ ಕೋಲ್ಮಿಂಚಿನ ರಭಸ ಶಬ್ಧವಿಲ್ಲದಂತೆ...

ಎನ್ನಮನದಲಿ ಮೂಡಿಹುದು ಹೇಳತೀರದ ನೋವದು
ನಿನ ಸವಿನುಡಿಗೆ ಕಾಯುತಿಹ ಪುಟ್ಟ ಮನಸಿದು...

ನೀ ಮಾತಾಡೆ ಹೆಜ್ಜೆನ ಸವಿದಂತೆ
ನೀ ಮೌನವಾಗಿರೆ ಕಾರ್ಮೋಡ ಕವಿದಂತೆ...

ಹೇಳತೀರದು ನೋಡು ಎಂಥಹಾ ಮೌನ
ಹೇಳು ನಿನ್ನಯ ದುಃಖ ದುಮ್ಮಾನ...

ಕಾದಿಹುದು ಈ ಕರ್ಣ ನಿನ್ನ ನುಡಿಯ ಕೇಳಲು
ತೆರೆಮನದ ಆವರಣ ಸವಿಮಾತ ನುಡಿಯಲು...

6 comments:

Anonymous said...

mmmm "mauna" antha kavana bardidya yenu antha complements kodli...... the way u hav written has made me MAUNA .....HMM IAM GLAD YAAR

..... said...

ನೀ ಮೌನವಾಗಿರೆ ಕಾರ್ಮೋಡ ಕವಿದಂತೆ...
ee saalu tumba like aaytu..
matthe, ondh doubt..ninge maatu, maunagalalli yaavdu jaasthi ishta?
koneyalli, ninge maate beku anno aase ide..adakke kelde..

Prashanth Urala. G said...

ತಂಗಾಳಿ ಯಂತೆ ಬಂದು ಸೋಕುವ ಮಾತು,
ಸಾಗರದ ಅಲೆಯಂತೆ ತೇಲಿಬರೋ ನಗು,
ರವಿತೇಜನ ಕಿರಣಗಳ ರೀತಿ ನೋಟ,
ಮರುಭೂಮಿಯ ಮಳೆಯಹಾಗಿನ ಮೌನ....

ಇದೆಲ್ಲ ನನ್ಗೆ ಇಷ್ಟ...
ಕಡೆಯಲ್ಲಿ ನನು ಮಾತಾಡು ಅಂತಾನೇ ಹೇಳಿರೋದು....

Unknown said...

manasige thumba santhosha adaga mathugalu eche baralla sir ella olage ulkoluthe. nanagu ega ade agide. Thumbane chennagide.

I request u to continue this.

Unknown said...

photo ge takka saalugalu

anusha said...

ನಿಮ್ ಹೋಡ್ಗೀ ಬೇಗ ಮಾತಡ್ಲಿ