
ಪಂಜರದ ಹಕ್ಕಿಯೊಂದು ಕೂಗುತ್ತಲಿತ್ತು
ಪುಟ್ಟ ಗೂಡಿನಲಿ ಹಾಡುತ್ತಲಿತ್ತು...
ಬೆಳಗಾಯಿತೆಂದರೆ ಆ ಪಂಜರದ ಪ್ರಪಂಚ
ನಾ ಹಾಕುವ ಕಾಳೇ ಸಾಕು ಅದಕೆ ಕೊಂಚ...
ಅದು ಹುಟ್ಟಿದುದು ಇಲ್ಲೇ, ಬಾಳಿದುದು ಇಲ್ಲೇ
ಬಹುಶಃ ಅದರ ಜೀವನವೆಲ್ಲಾ ಇಲ್ಲೇ...
ಹಾಗೆಂದು ನಾನು ನನೆಯುತಿರುವಾಗಲೇ
ಹಾರಿಹೋಯಿತು ಒಂದು ಪಕ್ಷಿ ಕಣ್ಣ ಎದುರಿನಲ್ಲೇ...
ನಾ ಹೊರಟೆ ಅದನು ಕಾಪಾಡಲು
ಬರುವ ಸಂಕಟದಿಂದ ಅದನು ಪಾರುಮಾಡಲು...
ಹಾರಿತೆನ್ನ ಪಕ್ಷಿ ದೂರ ಗಗನದೆಡೆಗೆ
ಅರಿಯದೆ ತನ್ನ ಜೀವನದ ಅಂತಿಮ ಘಳಿಗೆ...
ಅದರ ಮನದಲಿ ಇದ್ದಿರಬಹುದೇನೋ ಕಾತರ
ಪೂರ್ಣ ಆಗಸದಿ ಹಾರುವ ಅವಸರ...
ಆದರೆ ವಿಧಿಯ ಬರಹ ಬೇರೆಯೇ ಇತ್ತು
ಆಗಸದಿ ಒಂದು ಹದ್ದು ಆಹಾರಕೆ ಕಾದಿತ್ತು...
ನನ್ನ ಪಕ್ಷಿ ಹಾರಲಾಗಲಿಲ್ಲ ಗಗನದಿ ಎತ್ತರಕೆ
ಸೋತು ಹೋಯಿತು ನನ್ನ ಪಕ್ಷಿ ಜೀವನಕೆ...
ನನ್ನ ಪಕ್ಷಿ ಹದ್ದಿಗೆ ಆಹಾರವಾಯ್ತು
ಅದರ ಪಂಜರದ ಜೀವನ ಮುಕ್ತಾಯವಾಯ್ತು...
2 comments:
climax bahala tragedy agide
chennagide papa hakki ge yako astu avsara
Post a Comment