
ಭುವಿಯೇ ಹತ್ತಿ ಉರಿದಂತೆ ಭಾಸವಾಗುತಿಹುದಿಂದು
ಸುತ್ತ ಕಣ್ಣಾಡಿಸಿದರೂ ಕಾಣದು ಮೋಡದ ತುಣುಕೊಂದು...
ಬೀಸಿ ಬರುವುದು ಗಾಳಿ ಶಾಖವ ಹೊತ್ತು
ಜ್ವಾಲೆಯ ಶಾಖದ ಪರಿಯ ಅನುಭವಿಸಿದರೇ ಗೊತ್ತು...
ಬತ್ತಿಹೋಗಿಹುದು ನೋಡು ಕೆರೆ, ತೊರೆ, ಜಲರಾಶಿಯು
ಸಾಯುತಿಹುದು ನೋಡು ಅದರ ಒಡಲಿನ ಜೀವರಾಶಿಯು...
ಸಂಜೆಯಾಯಿತೆಂದರೇನು, ತಂಪುಗಾಳಿ ಇಲ್ಲ ನಿನಗೆ
ಅನುಭವಿಸಲೇ ಬೇಕು ಸೂರ್ಯಕಿರಣಗಳ ಧಗೆ...
ದಿನನಿತ್ಯವೂ ಬೆವರಿನ ಜಳಕವ ನೀ ಮಾಡಬೇಕು
ನಿನಗೆ ಸಿಗುವ ಬಿಸಿನೀರಿನಿಂದ ದಾಹ ನೀಗಬೇಕು...
ಬಿರುಬಿಸಿಲ ಬೇಗೆಯ ಪರಿಯ ಹೇಳುತಿಹೆನಿಂದು
ಈ ಬಿಸಿಲ ತಾಪವನು ಅನುಭವಿಸಿದವ ನಾನೆಂದು...
3 comments:
hoonri namma office AC kettogi nange adara bisi gottagide
navuuuuuuuuu huttiriode bisilu nadu gulbaraga chennagide
navuuuuuuuuu huttiriode bisilu nadu gulbaraga chennagide
Post a Comment