ಚಾರಣದ ಹಾದಿಯಲ್ಲಿ...
ನೋಡುಬಾ ಗೆಳೆಯ
ನಿಸರ್ಗದ ಸೌಂದರ್ಯವ
ಬಣ್ಣಿಸಲು ಅಸಾಧ್ಯ
ಇದರ ಆಂತರ್ಯವ
ಬದುಕೆಂಬ ಪಯಣದಿ
ಚಾರಣಿಗನು ನೀನು..
ಮುನ್ನುಗ್ಗಿ ಬಾ ಗೆಳೆಯ
ಕೂಗಿ ಹೇಳಿದೆ ಮೇಲಿರುವ ಬಾನು...
ಮುನ್ನುಗ್ಗಿ ಬಾ ಗೆಳೆಯ
ಜೀವನದ ಕಾನನವ ದಾಟಿ
ನಿನ್ನ ಮುಂದೆ ಸಿಗುವ
ಕಷ್ಟ ಕಾರ್ಪಣ್ಯವ ಮೀಟಿ
ಸಿಗುವುದು ನಿನಗೆ
ಕಠಿಣವಾದ ಕಂದರಗಳು...
ಮುನ್ನುಗ್ಗು ಗೆಳೆಯ
ಬಹಳ ಸುಂದರವೀ ಕಂದರವು...
ಸಿಗುವುದು ನಿನಗೆ
ತಂಪಾದ ನೆರಳು...
ಅಲ್ಲೆ ನಿಲ್ಲಬೇಡ
ಗೆಳೆಯ ಗುರಿಮುಟ್ಟುವವರೆಗು
ಸಮಯವಿಲ್ಲ ನಿನಗೆ
ಗುರಿ ಮುಟ್ಟುವವರೆಗೆ
ಕೂಗಿ ಕರೆದಿದೆ ಮೇಲೆ
ಸಂತೃಪ್ತಿಯ ಸಂತೋಷದ ಬುಗ್ಗೆ...
ಗುರಿಮುಟ್ಟಿದ ಸಂತಸ
ಎಂಥಹಾ ಮಧುರ
ಮರೆವೆನೀ ನಿನ್ನ ಕಷ್ಟಗಳ
ಜೀವನವಿದು ಬಲು ಸುಂದರ...
11 comments:
ಕವನ ಬರಹದ ಮೊದಲ ಪ್ರಯತ್ನದಲ್ಲಿಯೇ ಷಟ್ಕಾರ ಹೊಡೆದಿದ್ದೀರಿ. ಬಣ್ಣಿಸಿದಷ್ಟೂ ಇನ್ನೂ ಹೆಚ್ಚಿನ ಅವಕಾಶವೀಯುವ ನಿಸರ್ಗದ ಬಗ್ಗೆ ಬಹಳ ಚೆನ್ನಾಗಿ ವರ್ಣಿಸಿದ್ದೀರಿ. ಮಲೆನಾಡಿನ ದಿನಗಳ ನೆನಪು ಮರುಕಳಿಸಲು ಅವಕಾಶ ಮಾಡಿದ್ದಕ್ಕೆ ವಂದನೆಗಳು.
ಈ ಕವನದ ಮುಕ್ತಾಯ ನನಗೆ ಬಹಳವಾಗಿ ಹಿಡಿಸಿತು
ಗುರಿಮುಟ್ಟಿದ ಸಂತಸ
ಎಂಥಹಾ ಮಧುರ
ಮರೆವೆನೀ ನಿನ್ನ ಕಷ್ಟಗಳ
ಜೀವನವಿದು ಬಲು ಸುಂದರ...
ಜೀವನದ ಮಜಲನ್ನು ನಿಸರ್ಗಕ್ಕೆ ಹೋಲಿಸಿ ಚೆನ್ನಾಗಿ ನಿರೂಪಿಸಿರುವಿರಿ. ಕೊನೆಯಲ್ಲಿ ಮುಕ್ತಿ ಎಂದರೇನುಂಬದನ್ನು ತಿಳಿಸುವಲ್ಲಿ ಅಧ್ಯಾತ್ಮಿಕತೆಯನ್ನು ತಂದಿರುವಿರಿ.
ಇಂತಹ ಇನ್ನೂ ಹತ್ತು ಹಲವಾರು ನೂರಾರು ಕವನಗಳು ನಿಮ್ಮ ಮನದಾಳದಿಂದ ಮೂಡಿ ಬರಲಿ.
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
nimma kavana thumbaa chennagide..
heege barithaairi.
padagaLa jODane adBhutha..!!
ಬದುಕೆಂಬ ಪಯಣದಿ
ಚಾರಣಿಗನು ನೀನು..
ಮುನ್ನುಗ್ಗಿ ಬಾ ಗೆಳೆಯ
ಕೂಗಿ ಹೇಳಿದೆ ಮೇಲಿರುವ ಬಾನು...
thumba chennagi barediddira meleina salu galu soooooperb
naanu obba chaaraNiga.. chaaraNavannu badukinalli aLavadisikoLLuva pariyannu chennaagi baNNisiddeera...
hello pachu tumba chennagi bardidiya ninna eebaravanige heege munduvareyalli......
en helali naanu???? abba.... nijavaagalu bahala uttama kannadavannu upayogisi barediddeeri.... sakkattaagide...
ooooooooooooops it s superb!!![:)]
very nice brother...
all r really cooooooooooool..!!
n vry interestingg :o)
really gr8 n sweet of u..
obba charaniganaagi, nanu nimma kavanadalle yavudo betta hattida khushi kande.
Sakkathhagide kano....
Naanu trecker aadrinda... I can understand all the things which u have tried to explain...
Your comparision and ur way of expressing is too good..
Keep it up
Post a Comment