
ಸೌಮ್ಯ ನಮ್ಮ ಮನೆ ಹುಡುಗಿ. ತುಂಬಾ ಒಳ್ಳೇಗುಣ ಇದ್ರೂ ಯಾಕೂ ಏನೂ ಸ್ವಲ್ಪನೇ ಸ್ವಲ್ಪ ಬುಸ್ಸ್ ಅಂತಾಳೆ, ಯಾವಾಗ್ಲೂ ಅಲ್ಲ. ಅವಳಿಗಾಗಿ ನಾ ಬರೆದ ಕವನ ಇದು.... ಸೌಮ್ಯ ಈ ಬಡಪಾಯಿ ಮೇಲೆ ನಿನ್ನ ಕ್ಷಮೆ,ಕರುಣೆ,ದಯೆ ಇರಲಿ ಎಂದು ಕೋರುತ... ;)
ತರವಲ್ಲವೀ ಮುನಿಸು ನಿನಗೆ
ನಿನ್ನ ಮೊಗಕೆ ಚೆಂದ ಆ ಮುಗುಳ್ನಗೆ
ಮುನಿಸು ಏತಕೆ ನಿನಗೆ ನನ್ನೋಡನೆ ಹೇಳು
ಮುನಿಸುನಿನ್ನೊಡನಿರಲು ಸುಖವಿಲ್ಲ ಬಾಳು...
ತೆಗೆ ಮುನಿಸ ಮನಸಿಂದ, ಹೊಂದು ನೀ ಆನಂದ
ಧರಿಸುನೀ ನಗೆಯೊಂದ, ಕಿರುನಗೆಯ ಬೀರೋಂದ...
ಮುನಿಸು ಬಂದರೆ ನಿನಗೆ ತಾಳ್ಮೆಯನು ಕಳಿಸು
ನಗು ನಗುತ ನೀನು ಮುನಿಸನ್ನ ಜಯಿಸು...
ಹುಸಿಕೋಪವದು ಬರಲು ಒಮ್ಮೆ ನೀ ಸಹಿಸು
ಕೋಪವ ಓಡಿಸಲು ಮತ್ತೆ ಸಂಖ್ಯಗಳ ಎಣಿಸು...
ತಂದೆ ತಾಯಿಯು ಇಟ್ಟ ಹೆಸರ ಉದ್ದರಿಸು
ನಗು ನಗುತಲಿದ್ದರೇ ಈ ಬಾಳಿನಲಿ ಸೊಗಸು... :)
10 comments:
Re thanks kanri nimage nimma munisige ondu kavan bario hage madiddke
lo maga chennagi ide soumya avar munisu bitta thakshna innondu kavan bari ok na
ha ha ha ha ...Kavana chennagide munisu taravalla..neenoo...smile kodu..
naanu yavaglu hasanmkhi kano...
:D
Regards,
Prashanth Urala. G
kavana thumbaa chennagide
ivana kavana bariyo vegakke saaTi illa...ella kavigaLannu neevaLisi bisaaka beku....inspiration eno swalpa jaastine sikbiTTide...ee maLegaalakke evana kavanagaLu seridre, ativrusTi kachita
just kidding kaNo :) , keep the good work going
ಮೊದಲಿಗೆ ಮಗು ಫೋಟೋದಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಿದ್ದಾಳೆ.
ಎರಡನೆಯದಾಗಿ ನಿಮ್ಮ ಓದಿದ ನಂತರ ಅಥವಾ ಕೇಳಿದ ನಂತರ ಮುನಿದ ಸೌಮ್ಯ - ಹಸನ್ಮುಖಿ ಆಗಿ - ನಿಮ್ಮ ಕೊರಲಿಗೆ ಜೋತು ಬಿದ್ದಿರಬೇಕು. ಅಲ್ವೇ?
ಸುಂದರ ಸಾಲುಗಳು - ಎಂತಹ ಕೋಪಿಷ್ಟರನ್ನೂ ತಣ್ಣಾಗಾಗಿಸುವಂತಿದೆ
ಬರಹ ಕಾಯಕದ ಅನವರತ ಮುಂದುವರೆಯಲಿ
munidavara olisikollalu yaradru nange kelidre nimma reference kodtini
Sari prashant
innu munisodilla naanu. nimma kavana odida nantara tilkonde munisu taravalla vendu.
munisidavarannu nagisokkagi iro nimmantavariggagi aadru husi munisu maadkollodu olledu ansotte.
channagide kavana mattu munisiro hennina hesroo kooda
Post a Comment