
ನೋಡಬನ್ನಿರಿ ನೀವು ನಮ್ಮೂರ ಕೆರೆಯ
ನಿಸರ್ಗದ ಸೊಬಗಿನ ಒಲುಮೆಯ ಅಂಗಳವ
ನೀವಿಲ್ಲಿ ಕಾಣುವಿರಿ ನಿಸರ್ಗದ ಸಿರಿಯ
ಚಿಮ್ಮೆಂದು ಜಿಗಿದು ಈಜುವ ಮತ್ಸ್ಯರಾಶಿಯ
ಬೆಳಗಿನ ಓಟಕಿದು ಮಾಡಿಟ್ಟ ಸ್ವರ್ಗ
ಮನಸ್ಸಿನ ಶಾಂತಿಗಿದು ಸರಿಯಾದ ಮಾರ್ಗ
ಕಾಣಿರಿ ಇಲ್ಲಿನ ಪುಟ್ಟ ಉದ್ಯಾನವನವ
ನಿಸರ್ಗದ ಬಣ್ಣಗಳ ಸರಿಯಾದ ಮಿಶ್ರಣವ
ದೋಣಿವಿಹಾರದ ಉಲ್ಲಾಸ ಹೊಂದಿರಿ
ದೇಶವಿದೇಶಗಳ ಪಕ್ಷಿಯನು ಕಾಣಿರಿ
ದಿನನಿತ್ಯ ಇಲ್ಲಿಗೆ ಬರುವ ಮಂದಿ ನೂರಾರು
ಬಂದು ಮರೆವರಿಲ್ಲಿ ತಮ್ಮ ತಂಟೆ ತಕರಾರು
ಕವಿಗಳಿಗೆ ಸ್ಪೂರ್ತಿಯನು ನೀಡಿದ ಕೆರೆಯು
ಯುವ ಸೈನಿಕರ ತರಬೇತಿಯ ತಾಣವು
ಪ್ರೇಮಿಗಳು ಬರೆವರು ಪ್ರೇಮದ ಮುನ್ನುಡಿಯ
ಸುತ್ತುತಾ ಸವಿಯುತಾ ಇದರ ಸೌಂದರ್ಯವ
ಇದುವೇ ನಮ್ಮೂರ ಹೆಮ್ಮೆಯ ಕೆರೆಯು
ಒಮ್ಮೆ ಭೇಟಿ ಕೊಡಿ ಇದು ಪ್ರಕೃತಿಯ ಕರೆಯು...
1 comment:
Namora kereya bagge chennagi helidira...
dhanyavaada...
Post a Comment