ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Tuesday, June 24, 2008

ಕಾವ್ಯ ಗಂಗೆಯನ್ನರಸುತ್ತಾ...

ಬಹಳದಿನಗಳಾಗಿ ಹೋಯಿತು
ಕಾವ್ಯ ಗಂಗೆಯನ್ನ ಹರಿಬಿಟ್ಟು
ಎಲ್ಲಿ ಹೊರಟಿದೆಯೋ ಅವಳ ಪಯಣ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಮುಂಜಾನೆ ಎದ್ದು ಸೂರ್ಯೋದಯಕ್ಕೆ
ಮುಂಚಿನಸಮಯದಲ್ಲಿ ಜಳಕವಮಾಡಿ
ಜಪ ತಪದಲ್ಲಿ ಲೀನವಾಗುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಪ್ರತಿದನದ ಎಂದೂ ಮುಗಿಯದ
ಪಯಣದಲ್ಲಿ ದಾರಿಯಲ್ಲಿ ಸಿಕ್ಕುವ
ಅಪರಿಚಿತ ಮುಖಗಳಲ್ಲಿ ಅಡಗಿರುವ ಪರಿಚಯವನ್ನು ಹುಡುಕುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಹಕ್ಕಿಗಳ ಇಂಪಾದ್ ಇಂಚರದಿ
ದಿಗಂತದಿ ತೇಲುವ ತಿಳಿ ಮೋಡದ ನಡುವೆ
ಇಣುಕಿ ನೋಡುವ ಭಾಸ್ಕರನ ನೋಡುತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ತಂಪಾದ ತಂಗಾಳಿಯಲ್ಲಿ ತೇಲಿಬರುವ
ನನ್ನವರ ನೆನಪುಗಳ ಮೆಲುಕುಹಾಕುತ್ತಾ
ದಿನದ ದಣಿವನ್ನ ಬೆಳದಿಂಗಳ ಚೆಂದಿರನೊಡನೆ ಕಳೆಯುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

1 comment:

bhadra said...

ಎಂದೂ ಮುಗಿಯದ
ಪಯಣದಲ್ಲಿ ದಾರಿಯಲ್ಲಿ ಸಿಕ್ಕುವ
ಅಪರಿಚಿತ ಮುಖಗಳಲ್ಲಿ ಅಡಗಿರುವ ಪರಿಚಯವನ್ನು ಹುಡುಕುತ್ತಾ


ಬಹಳ ಚೆನ್ನಾಗಿ ಮನದ ಅನಿಸಿಕೆಯನ್ನು ಹೊರಗೆಡಹಿದ್ದೀರಿ. ಎಲ್ಲರೂ ಎಲ್ಲೆಲ್ಲೂ ಹುಡುಕುತ್ತಿರುವುದೇ! ಆದರೆ ಕೆಲವೊಮ್ಮೆ ಏನನ್ನು ಎಲ್ಲಿ ಅನ್ನೋದು ಮಾತ್ರ ತಿಳಿದೇ ಇರೋಲ್ಲ. ಕವನ ಮಾತ್ರ ಬಹಳ ಚೆನ್ನಾಗಿ ನಿರೂಪಿತವಾಗಿದೆ

ಇಂತಹ ಕವನಗಳು ಇನ್ನೂ ಹೆಚ್ಚು ಹೆಚ್ಚು ಬರಲಿ

ಗುರುದೇವ ದಯಾ ಕರೊ ದೀನ ಜನೆ