ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, September 12, 2008

ಚೆಂಗುಲಾಬಿ ಅರಳಿ ನಗುವ ಹೊಮ್ಮಿಸೀತೇ ???

ಮನದ ತುಂಬಾ ಬೇಸರ, ಏನೋ ಕೇಳುವ ತವಕ, ಮನಸ್ಸಿಗೆ ಬೇಸರವಾದರೆ ? ನೊಂದಮನಕೆ ಮತ್ತೊಮ್ಮೆ ನೋವುಕೊಡುವುದು ಎಷ್ಟುಸರಿ ? ನಾನಾಡುವ ನಾಲ್ಕುಮಾತುಗಳು ಆ ಜೀವಕ್ಕೆ ನೆಮ್ಮದಿಯ ತರಲೆಂದು ನನ್ನ ಆಸೆ, ಆದರೆ ಆ ಮನಸ್ಸು....

ಬೇಸರದ ಮನದಿ ಉಲ್ಲಾಸಮೂಡಿಸುವ ನನ್ನ ಸರ್ವಪ್ರಯತ್ನಗಳೂ ವಿಫಲವಾಯಿತೇ ??? ಆ ಪುಟ್ಟ ಘಾಸಿಗೊಂಡ ಮನಸ್ಸಿಗೆ ಗೆಳೆತನದ ಔಷಧವ ಲೇಪನ ನನ್ನಿಂದ ಹಚ್ಚಲಾದೀತೇ ? ಒಮ್ಮೊಮ್ಮೆ ಮನಃ ಬಿಚ್ಚಿಮಾತನಾಡುವ, ಮತ್ತೊಮ್ಮೆ ಮೌನವಾಗಿರುವ ಆ ಮನಸ್ಸು ವಿಚಲಿತಗೊಂಡಂತಿದೆ. ನನ್ನ ಜೀವನದ ಅನುಭವವನ್ನೆಲ್ಲಾ ಧಾರೆಯೆರೆದಾಯ್ತು, ಆ ಮನಸ್ಸಿಗೆ ಚೇತರಿಕೆ ಮೂಡಿಸುವ ಪ್ರಯತ್ನದಲ್ಲಿ. ಓ ದೇವರೇ... ಏತಕ್ಕೆ ಈ ತುಡಿತ !!!

ಆ ನಗೆಯಲ್ಲಿ ಅದೇನು ಮೋಡಿ !!! ಏನೋ ಒಂದುರೀತಿಯ ಸೆಳೆತ ಮೇಲ್ನೋಟಕ್ಕೆ... ಸ್ವಲ್ಪ ಸೂಕ್ಷ್ಮವಾಗಿ ನೋಡಿದಾಗ ಆರಲಾಗದ ಗಾಯ... ಮುದುಡಿಹೋದ ಕನಸುಗಳ ದೊಡ್ಡ ಭಂಡಾರ. ಆ ಮರುಭೂಮಿಯಲ್ಲಿ ಒಂದು ಚೆಂಗುಲಾಬಿಯ ಚಿಗುರಿಸುವ ಪ್ರಯತ್ನ ನನ್ನದು... ಅದು ಚಿಗುರೀತೇ ??? ಸುಂದರ ಸ್ವಪ್ನಗಳು ಫಲಿಸೀತೇ ??? ಆ ಚಿಗುರಿದ ಗಿಡದಿಂದ ಒಂದು ಚೆಂಗುಲಾಬಿ ಅರಳಿ ನಗುವ ಹೊಮ್ಮಿಸೀತೇ ???

2 comments:

Amit said...

enu swami, mududida taavareyannu aralisuva prayatnavO?
innobbarannu endiggo santosha padisalu saadhyavilla, taatkaalikavaagi maadabahudu satya , adu sanaatanavaagalU saadhya anteera?

Prashanth Urala. G said...

ಪ್ರಯತ್ನ ನಮ್ಮದು ಅಲ್ವಾ ???

ನಿಮ್ಮ ಗೆಳೆಯ/ಗೆಳತಿ ಬೇಸರದಿಂದ ಇದ್ದಲ್ಲಿ ನೀವು ಅವರನ್ನ ಸಮಾಧಾನಿಸಲು ಪ್ರಯತ್ನ ಮಾಡೋದಿಲ್ವೇ ???


ಅದೇ ಒಂದು ಚಿಕ್ಕ ಪ್ರಯತ್ನ ನನ್ನದು.... ಅದು ಯಶಸ್ವಿ ಕೂಡಾ.... :)