ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Tuesday, September 9, 2008

ಮಳೆಬರುವ ತುಸು ಮುಂಚೆ

ಮಳೆಬರುವ ತುಸು ಮುಂಚೆ
ತಂಗಾಳಿ ಬೀಸಿತ್ತು...
ನಿನ್ನ ಕಂಪತಂದಿತ್ತು...
ಮನಸ್ಸೇಕೋ ನಾಚಿತ್ತು...
ಮುಗುಳ್ನಗೆಯು ಹೊಮ್ಮಿತ್ತು...
ನಿನ್ನ ಸನಿಹ ಬೇಕಿತ್ತು...
ನಿನ್ನ ಒಲುಮೆಗೆ ಕಾದಿತ್ತು...
ಸಿಹಿಮುತ್ತ ಬೇಡಿತ್ತು...

ಹಾ ಗೆಳತೀ... ಕಂಡೆ ನಾ ನಿನ್ನನು...
ಕೋಲ್ಮಿಂಚಿನಲಿ ನಿನ್ನ ಕಣ್ನೋಟ ಕಂಡೆ
ತುಂತುರು ಹನಿಯಲಿ ಸಿಹಿಮುತ್ತನುಂಡೆ...
ತಂಗಾಳಿಯಲಿ ನೀ ಬಂದೆನ್ನ ಅಪ್ಪಿದೆ...

ಮಳೆಗೂ ನಿನಗೂ ಎಂತಹಾ ಹೋಲಿಕೆ...

4 comments:

anusha said...

:)
good one
illu iga male baro haag agide..
nimm kavite sakattag suit aagta ide e situationge :P

Anonymous said...

ಮಳೆಗೂ ಮತ್ತೆ ನಿನ್ನ ಹುಡುಗಿಗೂ ಹೋಲಿಸಿ ಬರೆದ ಕವನ ಸೂಪರ್ ಇದೆ.ಪ್ರಶಾಂತಣ್ಣ..ಅದೇನೋಪ..ಮಳೆ ಅಂದ ಕೂಡಲೇ ಹುಡುಗಿ ನೆನಪಿಗೆ ಬರ್ತಾಳೆ..ಮಳೆ ಸೂಪರ್ರ ಅತವ ಹುಡುಗಿ ಸೂಪರ್ರ ಒಂದು ಗೊತ್ತಾಗ್ತಿಲ್ಲ....:(

ಕವನ ಸೂಪರ್[:)]...

Prashanth Urala. G said...

Thanks ಕಣೋ...

ನನ್ನ ಕನಸಿನಕನ್ಯೆಗೆ ಬರೆದ ಸಾಲುಗಳು ಇವು... ನೀನು ಹೇಳೋದು ನಿಜ ಕಣೋ... ತುಂತುರುಮಳೆಯಲ್ಲಿ ಗೆಳತಿಯ ಬೆಚ್ಚಗಿನ ನೆನಪು... ಅವಕಾಶಸಿಕ್ಕಿದಲ್ಲಿ ಆ ಬೆಚ್ಚನೆಯ ಅಪ್ಪುಗೆ.... ನೆನೆಸಿಕೊಂಡ್ರೇ ಮೈ ಜುಂಂಂ ಅನ್ನತ್ತೆ....

ಒಟ್ಟಿನಲ್ಲಿ ಆ ಮಳೆಯನಡುವೆ ಹುಡುಗಿ ಇದ್ದರೆ ಸೂಪರ್ರೋ ಸೂಪರ್..... ;)

Unknown said...

ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

ನಿಮ್ಮ ಮಳೆಬರುವ ತುಸು ಮುಂಚೆ ಕವನ ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ಬಂದಿದ್ದೇನೆ.

KannadaHanigalu.com

ನಾವು ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇಲ್ಲಿ ನಾವು ಇಂದಿನ ಯುವ ಉತ್ಸಾಹಿ ಕವಿಗಳ ಕವನ, ಹನಿಗವನಗಳನ್ನು ಮತ್ತು ಕನ್ನಡ ಹಾಸ್ಯವನ್ನು ಪ್ರಕಟಿಸಿ, ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು ನಮ್ಮ ಧ್ಯೇಯ.

ನೀವು ಈ ಒಂದು ಪ್ರಯತ್ನವನ್ನು ಪ್ರೋತ್ಸಾಹಿಸುತ್ತೇರೆಂದು ನಂಬಿರುತ್ತೇನೆ.

ನೀವು ಮೀಕ್ಷಿಸಿ, ನಿಮಗೆ ತೃಪ್ತಿಯಾದಲ್ಲಿ ನಿಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ???

ಧನ್ಯವಾದಗಳೊಂದಿಗೆ.....
ಕನ್ನಡ ಹನಿಗಳ ಬಳಗ
kannadajokes@gmail.com