ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, December 4, 2008

ಕೊಡುಗೆ




ಮೇಘಮಾಲೆಯ ತುಂತುರಿನ ಸಿಂಚನದಿ
ಮಿಂದೆದ್ದ ಕುಸುಮ ಆಗಸವ
ನೋಡುತಾ ಮುಗುಳ್ನಕ್ಕಿತ್ತು

ಅರಳಿನಿಂತ ಕುಸುಮವನ್ನು ಚುಂಬಿಸುತಾ
ಬೀಸಿಬಂದ ಗಾಳಿ ಅದರ
ಪರಿಮಳವ ಘಮ್ಮನೆ ಹರಡಿತ್ತು

ಗಾಳಿಯೊಡನೆ ಬೆರೆತ ಸುಗಂಧ
ದುಂಬಿಯ ಕರೆತಂದಿತ್ತು,
ಅರಳಿನಿಂತ ಕುಸುಮ ನಾಚಿ ರಂಗೇರಿತ್ತು

ರಂಗೇರಿದ ಕುಸುಮ ಕುಸುಮಬಾಲೆಯ
ಮುಡಿಯೇರಿತ್ತು, ಶೃಂಗಾರ ಕಾವ್ಯಕ್ಕೆ
ಮುನ್ನುಡಿ ಬರೆದಿತ್ತು

ಕುಸುಮಬಾಲೆಯ ಶೃಂಗಾರ ಕಾವ್ಯಕ್ಕೆ
ಹೃದಯವೊಂದು ಮಿಡಿದಿತ್ತು,
ಕಣ್ ಕಣ್ಣಲ್ಲೇ ಕವನ ಬರೆದಿತ್ತು

ಕವನದ ಛಾಪು ಹೃದಯದಲಿ
ಮೂಡಿತ್ತು, ಹೃದಯಗಳ ಮಿಲನ
ಮಹೋತ್ಸವ ಅನುದಿನವು ಸಾಗಿತ್ತು.

2 comments:

Unknown said...

ಕೆಲವರ ಮನಸ್ಸಿಗೆ ಇರುವೆ ಸರಿದಿರೋ ಹಾದಿ ಕಾಣಿಸುತ್ತಂತೆ,ಮೊಗ್ಗು ಬಿರಿಯೋ ಸಮಯ ತಿಳಿಯುತ್ತಂತೆ, ಮಂಜು ಬೀಳೋ ಸದ್ದು ಕೇಳುತ್ತಂತೆ, ನೀರು ಮುಗಿಲಾಗೋದು ಅರಿವಾಗುತ್ತಂತೆ,ಮುಗಿಲು ಮಳೆಯಾಗೋದು ಸೂಚಿತವಾಗುತ್ತಂತೆ, ಆ ಮಳೆ ಬಿದ್ದು ತೆನೆ ತೂಗುವ ರೀತಿಯಲ್ಲಿ ಅವರು ಮತ್ತವರ ಕವನ ಬೆಳೆಯುತ್ತಂತೆ......... :)

anusha said...

abba!
super!!!