ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, March 31, 2010

ನನ್ನ ಚಲುವೆ..

ನನ್ನವಳು ಈ ಚಲುವೆ ಬಲು ಅಂದಗಾತಿ
ಸಾಗರದ ಅಲೆಯಂತೆ ನೀ ತೋರುವಾ ಪ್ರೀತಿ…

ಒಮ್ಮೆ ಬಲು ಮೃದುವಾಗಿ ಬಂದೆನ್ನ ಸೋಕಿ
ಮತೊಮ್ಮೆ ರಭಸದಿ ಬಂದೆನ್ನ ತಾಕಿ…

ಕಂಡೆನಾ ಏರಿಳಿತ ನನ್ನವಳ ಪ್ರೀತಿಯಲಿ
ಏನು ಗೊಂದಲವೊ ಏನೊ ಆಕೆಯಾ ಮನಸಿನಲಿ…

ಒಮ್ಮೊಮ್ಮೆ ಸಂತಸದಿ ಬಳಿನನ್ನ ಬರುವಳು
ಮತ್ತೊಮ್ಮೆ ಬೇಸರದಿ ದೊರದಲಿ ಇರುವಳು…

ಚೆಂದುಟಿಯ ಚೆಲುವೆ ಈ ಮೌನ ಬೇಕೇ
ಬಾಯ್ದೆರೆದು ಸವಿನುಡಿಯೆ ಈ ಮೌನ ಸಾಕೇ…

ಮಕ್ಕಳಾಟವು ಚೆನ್ನ ಜಿಂಕೆ ಓಟವು ಚೆನ್ನ
ಓ ನನ್ನ ಚೆಲುವೆ ನೀ ಮಾತಾಡೆ ಬಲುಚೆನ್ನ…

ಮಾತಾಡು ಎನಕೊಡ ಈಗಲಾದರೂ ನಗುತಲಿ
ಕಾದಿಹುದು ಈ ಹೃದಯ ನಿನಗಾಗಿ ತವಕದಲಿ…

2 comments:

ಮನಸಿನಮನೆಯವನು said...

Prashanth Urala. G-

ನಿಮ್ಮ ಚೆಲುವೆಯ ವರ್ಣನೆ ಸುಂದರ..

ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com

ಚುಕ್ಕಿಚಿತ್ತಾರ said...

ಸು೦ದರವಾದ ಕವಿತೆ...
ನನ್ನ ಬ್ಲಾಗಿನಲ್ಲಿಯೂ ಸು೦ದರಕವಿತೆಯೊ೦ದಿಗೆ ಪ್ರತಿಕ್ರಿಯಿಸಿದ್ದಕ್ಕೆ ವ೦ದನೆಗಳು...